ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಪ್ರಸ್ತುತ ಲೋಕೇಶನ್
23917
in | en
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಗ್ಯಾಲಕ್ಸಿ® ಕಳೆನಾಶಕ

ಗ್ಯಾಲಕ್ಸಿ® ಕಳೆನಾಶಕವು ಸೋಯಾಬೀನ್ ಬೆಳೆಯಲ್ಲಿ ಅಗಲ ಎಲೆಯ ಕಳೆಗಳನ್ನು ಮೊಳೆತ ನಂತರ ನಿಯಂತ್ರಿಸಲು ಅನುಕೂಲಕರ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತದೆ. ಇದು ಬೆಳೆಗಾರರಿಗೆ ವಿಶಾಲ ವ್ಯಾಪ್ತಿಯ ಕಳೆ ನಿಯಂತ್ರಣಕ್ಕೆ ಸೂಕ್ತವಾದ ಅಗಲ ಎಲೆಯ ಕಳೆನಾಶಕ್ಕಾಗಿ ಉತ್ತಮ ಆಯ್ಕೆಯನ್ನು ನೀಡುತ್ತದೆ.

ತ್ವರಿತ ವಿವರಣೆಯ ವಿಷಯಗಳು

  • ಅಗಲ ಎಲೆಯ ಕಳೆಗಳ ಮೇಲೆ ತ್ವರಿತ ದಾಳಿ ಮತ್ತು ಅತ್ಯುತ್ತಮವಾಗಿ ಸುಟ್ಟು ಹಾಕುವ ಕಾರ್ಯ ವೈಖರಿ ಹೊಂದಿದೆ, ಇದರಿಂದಾಗಿ 1-2 ದಿನಗಳ ಕಡಿಮೆ ಅವಧಿಯಲ್ಲಿ ಕಳೆ ನಿರ್ಮೂಲನೆ ಮತ್ತು ನಾಶಕ್ಕೆ ಕಾರಣವಾಗುತ್ತದೆ
  • ಮಾರುಕಟ್ಟೆಯಲ್ಲಿ ಇರುವ ಇತರ ಉತ್ಪನ್ನಗಳಿಂದ ನಿಯಂತ್ರಿಸಲು ಸಾಧ್ಯವಿಲ್ಲದ ಕಠಿಣ/ನಿರೋಧಕ ಕಳೆಗಳನ್ನು ನಿಯಂತ್ರಿಸುತ್ತದೆ
  • ಕನ್ನೇ ಸೊಪ್ಪು ಮತ್ತು ಕುಪ್ಪಿ ಗಿಡದ ಮೇಲೆ ಅತ್ಯುತ್ತಮ ನಿಯಂತ್ರಣ
  • ಪ್ರತಿರೋಧಕ ನಿರ್ವಹಣಾ ಕಾರ್ಯಕ್ಕೆ ಸೂಕ್ತವಾಗಿದೆ
  • ಸಲ್ಫೋನಿಲ್ಯೂರಿಯಾ/ಎಎಲ್ಎಸ್ ಪ್ರತಿರೋಧಕ ಶಕ್ತಿಶಾಲಿ ಕಳೆಗಳ ಮೇಲೆ ಪರಿಣಾಮಕಾರಿ

ಸಕ್ರಿಯ ಪದಾರ್ಥಗಳು

  • ಫ್ಲುಥಿಯಾಸೆಟ್-ಮೀಥೈಲ್

ಲೇಬಲ್‌ಗಳು ಮತ್ತು ಎಸ್‌ಡಿಎಸ್

4 ಲೇಬಲ್‌ಗಳು ಲಭ್ಯವಿವೆ

supporting documents

ಉತ್ಪನ್ನದ ಮೇಲ್ನೋಟ

ಗ್ಯಾಲಕ್ಸಿ® ಕಳೆನಾಶಕವು ಥಿಯಾಡಿಯಾಜೋಲ್ ವರ್ಗ, ಇ ಗುಂಪಿಗೆ ಸೇರಿದ ಕಳೆನಾಶಕವಾಗಿದೆ. ಇದು ಅಗಲ ಎಲೆಯ ಕಳೆ ನಿಯಂತ್ರಣದ ಸುಧಾರಿತ ಕಳೆನಾಶಕ ತಂತ್ರಜ್ಞಾನವಾಗಿದೆ. ಗ್ಯಾಲಕ್ಸಿ® ಕಳೆನಾಶಕ ಎನ್ನುವುದು ಸೋಯಾಬೀನ್‌ ಬೆಳೆಯಲ್ಲಿ ಅಗಲ ಎಲೆಯ ಕಳೆ ಮೊಳೆತ ನಂತರ ಬಳಸುವ ಆಯ್ದ ಕಳೆನಾಶಕವಾಗಿದೆ. ಹುಲ್ಲು ನಿಯಂತ್ರಣಕ್ಕಾಗಿ ಗ್ಯಾಲಕ್ಸಿ® ಕಳೆನಾಶಕವನ್ನು ಹುಲ್ಲು ಕಳೆನಾಶಕಗಳೊಂದಿಗೆ ಟ್ಯಾಂಕ್ ಮಿಶ್ರಣವಾಗಿ ಬಳಸಿ ಮತ್ತು ವಿಶಾಲ ವ್ಯಾಪ್ತಿಯ ನಿಯಂತ್ರಣ ಪಡೆಯಿರಿ. ಗ್ಯಾಲಕ್ಸಿ® ಕಳೆನಾಶಕವು ವೇಗವಾಗಿ ಕೆಲಸ ಮಾಡುವ ರಾಸಾಯನಿಕ ವಿಧಾನವಾಗಿದ್ದು, ಇದನ್ನು ಎಲೆಗಳು ವೇಗವಾಗಿ ಹೀರಿಕೊಳ್ಳುತ್ತವೆ ಮತ್ತು ಜೀವಕೋಶ ಪೊರೆಯ ಅಡ್ಡಿ (ಪಿಪಿಒ) ಪ್ರಕ್ರಿಯೆಯ ಮೂಲಕ ಕಳೆಗಳನ್ನು ನಿಯಂತ್ರಿಸುತ್ತದೆ. ಇದು ನೇರ ಸಂಪರ್ಕದ ಕಳೆ ನಾಶಕವಾಗಿದೆ ಮತ್ತು ಅದರ ವಿಶಿಷ್ಟ ಕ್ರಮದಿಂದಾಗಿ ಎಲೆಗಳ ಮೂಲಕ ಕಾರ್ಯ ನಿರ್ವಹಿಸುತ್ತದೆ. ಇದು ಇತರೆ ವರ್ಗದ ಕಳೆನಾಶಕಗಳಿಗೆ ಅಡ್ಡ ಪ್ರತಿರೋಧಕತೆಯನ್ನು ಹೊಂದಿಲ್ಲ. ಗ್ಯಾಲಕ್ಸಿ® ಕಳೆನಾಶಕವು ಒಂದು ಸುರಕ್ಷಿತ ರಾಸಾಯನಿಕ ವಿಧಾನವಾಗಿದ್ದು, ಇದು ಮಣ್ಣಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಮುಂದಿನ ಬೆಳೆಗೆ ಸುರಕ್ಷಿತವಾಗಿದೆ. ಇದು ಸೋಯಾಬೀನ್ ಬೆಳೆಗೆ ಪ್ರಮುಖ ಸಮಸ್ಯೆ ಉಂಟು ಮಾಡುವ ಕಮ್ಮೆಲಿನಾ ಎಸ್‌ಪಿಪಿ, ದಿ ಗೇರಾ ಆರ್ವೆನ್ಸಿಸ್, ಅಕಾಲಿಫಾ ಇಂಡಿಕಾ, ಅಮರಂಥಸ್ ವಿರಿಡಿಸ್‌ಗಳಂತಹ ಅಗಲ ಎಲೆಯ ಕಳೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.

ಸಂಪೂರ್ಣ ಬೆಳೆ ಪಟ್ಟಿ

  • ಸೋಯಾಬೀನ್