ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಫಿಯೆಸ್ಟಾ® ಫೋರ್ಟೆ ಕಳೆನಾಶಕ

ಫಿಯೆಸ್ಟಾ® ಫೋರ್ಟ್ ಕಳೆನಾಶಕವು ನಾಟಿ ಮಾಡಿದ ಭತ್ತದಲ್ಲಿ ಕಳೆ ಮೊಳೆಯುವ ಮೊದಲು ಬಳಸುವ ಹರಳಿನ ರೂಪದ ಕಳೆ ನಿಯಂತ್ರಣ ಪರಿಹಾರವಾಗಿದೆ. ಉತ್ಪನ್ನದ ವಿಶಾಲ-ವ್ಯಾಪ್ತಿಯ ಸ್ವರೂಪವು ಹುಲ್ಲುಗಳು, ವಿಶಾಲ ಎಲೆಯ ಕಳೆಗಳು ಮತ್ತು ಜೊಂಡುಗಳಂತಹ ಕಳೆಗಳಿಂದ ಒಟ್ಟು ನಿಯಂತ್ರಣವನ್ನು ಪಡೆಯಲು ಸಹಾಯ ಮಾಡುತ್ತದೆ. ಫಿಯೆಸ್ಟಾ® ಫೋರ್ಟ್‌ನ ಎರಡು ರೀತಿಯ ಕ್ರಿಯೆಯು ಬಲವಾದ ಪ್ರತಿರೋಧಕ ನಿರ್ವಹಣೆಯನ್ನು ತೋರಿಸಲು ಸಹಾಯ ಮಾಡುತ್ತದೆ. ಈ ಉತ್ಪನ್ನದ ಸುಲಭವಾದ ಬಳಕೆಯ ಗುಣ ಇದನ್ನು ಇತರ ಉತ್ಪನ್ನಗಳಿಗಿಂತ ಭಿನ್ನವಾಗಿಸುತ್ತದೆ.

ತ್ವರಿತ ವಿವರಣೆಯ ವಿಷಯಗಳು

  • ಫಿಯೆಸ್ಟಾ® ಫೋರ್ಟ್ ಕಳೆನಾಶಕವು ಕಳೆ ಮೊಳೆಯುವ ಮೊದಲು ಬಳಸುವ, ವಿಶಾಲ-ವ್ಯಾಪ್ತಿಯ ಕಳೆ ನಿರ್ವಹಣಾ ಸೂತ್ರೀಕರಣವಾಗಿದೆ.
  • ಇದು ಆಯ್ದ ಮತ್ತು ವ್ಯವಸ್ಥಿತ ಕಳೆನಾಶಕವಾಗಿದ್ದು, ಎರಡು ಕ್ರಿಯೆಯ ವಿಧಾನದ ಮೂಲಕ ಕೆಲಸ ಮಾಡುತ್ತದೆ ಮತ್ತು ಮೊಳೆತ ಕಳೆಗಳ ಅತ್ಯುತ್ತಮ ನಿಯಂತ್ರಣವನ್ನು ನೀಡುತ್ತದೆ ಮತ್ತು ಬಲವಾದ ಪ್ರತಿರೋಧಕ ನಿರ್ವಹಣೆಯನ್ನು ತೋರಿಸುತ್ತದೆ.
  • ಹುಲ್ಲುಗಳು, ಅಗಲ ಎಲೆಯ ಕಳೆಗಳು ಮತ್ತು ಜೊಂಡುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ
  • ದೀರ್ಘಾವಧಿ ಉಳಿಯುತ್ತದೆ- ಹೊಲದಲ್ಲಿ ರಾಸಾಯನಿಕ ದೀರ್ಘಕಾಲದವರೆಗೆ ಕೆಲಸ ಮಾಡುತ್ತದೆ  
  • ಬೆಳೆಗೆ ಸುರಕ್ಷಿತವಾಗಿದೆ ಮತ್ತು ಬೆಳೆಯ ಮೇಲೆ ಯಾವುದೇ ಪರಿಣಾಮ ಬೀರದಿರುವ ಸುರಕ್ಷಿತ ರಾಸಾಯನಿಕವಾಗಿದೆ. ಇದು ಮಣ್ಣಿನ ಭೌತಿಕ ರಾಸಾಯನಿಕ ಗುಣಗಳನ್ನು ಬದಲಾಯಿಸುವುದಿಲ್ಲ.

ಸಕ್ರಿಯ ಪದಾರ್ಥಗಳು

  • ಪ್ರಿಟಿಲಾಕ್ಲೋರ್ 6% + ಪೈರಜೋಸಲ್ಫುರಾನ್ ಈಥೈಲ್ 0.15% ಜಿಆರ್

ಲೇಬಲ್‌ಗಳು ಮತ್ತು ಎಸ್‌ಡಿಎಸ್

3 ಲೇಬಲ್‌ಗಳು ಲಭ್ಯವಿವೆ

supporting documents

ಉತ್ಪನ್ನದ ಮೇಲ್ನೋಟ

ಫಿಯೆಸ್ಟಾ® ಫೋರ್ಟ್ ಕಳೆನಾಶಕವು ವಿಶಾಲ-ವ್ಯಾಪ್ತಿಯ, ಕಳೆ ಮೊಳೆಯುವ ಮೊದಲು ಬಳಸುವ ಕಳೆ ನಿಯಂತ್ರಣ ಸೂತ್ರೀಕರಣವಾಗಿದ್ದು, ಇದು ಭತ್ತದ ಹೊಲದಲ್ಲಿ ಎರಡು ರೀತಿಯ ಕ್ರಿಯೆಯ ಮೂಲಕ ಹುಲ್ಲುಗಳು, ಅಗಲ-ಎಲೆಯ ಕಳೆಗಳು ಮತ್ತು ಜೊಂಡುಗಳ ವಿರುದ್ಧ ದೀರ್ಘಾವಧಿಯ ನಿಯಂತ್ರಣವನ್ನು ಒದಗಿಸುತ್ತದೆ. ಉತ್ತಮ ದಕ್ಷತೆಗಾಗಿ ಏಕರೂಪದ ವಿತರಣೆಯೊಂದಿಗೆ ಹರಳಿನ ರೂಪದ ಸೂತ್ರೀಕರಣವು ರೈತರಿಗೆ ಸುಲಭವಾಗಿ ಅನ್ವಯಿಸಲು ಸಹಾಯ ಮಾಡುತ್ತದೆ. ಪ್ರತಿ ಹರಳು ಕೂಡಾ ವಿಶೇಷ ಸ್ಪ್ರೆಡರ್‌ ಹೊಂದಿದ್ದು, ಪರಿಣಾಮವಾಗಿ ಅದು ವೇಗವಾಗಿ ಹೀರಿಕೊಳ್ಳಲ್ಪಡುತ್ತದೆ. ಇದು ಕಳೆ ಹೊರ ಹೊಮ್ಮುತ್ತಿದ್ದಂತೆಯೇ ನಾಶಪಡಿಸುತ್ತದೆ ಮತ್ತು ಆರಂಭಿಕ ಹಂತದಿಂದಲೇ ಕಳೆ-ಮುಕ್ತ ವಾತಾವರಣವನ್ನು ಒದಗಿಸುತ್ತದೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ. 

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.