ಮುಖ್ಯಾಂಶಗಳು
- ಡಿಎಸ್‌ಆರ್‌ನಲ್ಲಿ ವಾರ್ಷಿಕ ಮತ್ತು ದೀರ್ಘಕಾಲಿಕ ಹುಲ್ಲಿನ ಅತ್ಯುತ್ತಮ ನಿಯಂತ್ರಣ
- ನಿಯಂತ್ರಿಸಲು ಕಠಿಣವಾದ ಕಳೆಗಳ ಮೇಲೆ ಹೆಚ್ಚು ಪರಿಣಾಮಕಾರಿ
- 2 ಗಂಟೆಗಳ ಮಳೆ ತಡೆಯುವ ಹೊಸ ತಂತ್ರಜ್ಞಾನ
- ಹುಲ್ಲಿನ ಜಾತಿಯ ಕಳೆಗಳ ಮೇಲೆ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ ಮತ್ತು 7-10 ದಿನಗಳಲ್ಲಿ ಕಳೆ ನಿರ್ಮೂಲನೆ ಮತ್ತು ನಾಶಕ್ಕೆ ಕಾರಣವಾಗುತ್ತದೆ
ಸಂಬಂಧಿತ ಡಾಕ್ಯುಮೆಂಟ್‌ಗಳು
ಉತ್ಪನ್ನದ ಮೇಲ್ನೋಟ
ಕ್ರೈಟೆಲ್® ಕಳೆನಾಶಕವು ಮೆಟಾಮಿಫಾಪ್ ಸೂತ್ರೀಕರಣವನ್ನು ಎಮಲ್ಸಿಫೈಬಲ್ ಸಾಂದ್ರತೆಯಾಗಿ ಹೊಂದಿದೆ. ಇದು ನೇರ ಬಿತ್ತನೆಯ ಭತ್ತ (ಡಿಎಸ್ಆರ್) ದಲ್ಲಿ ವಾರ್ಷಿಕ ಮತ್ತು ದೀರ್ಘ ಕಾಲಿಕ ಹುಲ್ಲಿನ ನಿಯಂತ್ರಣಕ್ಕಾಗಿ, ಕಳೆ ಮೊಳೆತ ನಂತರ ನಿವಾರಣೆಗೆ ಬಳಸಬಹುದಾದ ಆಯ್ಕೆಯಾಗಿದೆ. ಕ್ರೈಟೆಲ್® ಕಳೆನಾಶಕವು ಎಒಪಿಪಿ ಕಳೆನಾಶಕ - ಅರಿಲ್ ಆಕ್ಸಿ ಫಿನಾಕ್ಸಿ ಪ್ರೊಪಿಯಾನಿಕ್ ಆಮ್ಲ ಗುಂಪಿನ ಉತ್ಪನ್ನವಾಗಿದ್ದು, ಇದು ಅತ್ಯುತ್ತಮ ಪ್ರತಿರೋಧಕ ನಿರ್ವಹಣೆಯನ್ನು ತೋರಿಸುತ್ತದೆ. ಅಗಲ ಎಲೆ ಕಳೆಗಳು, ಜೇಕುಗಳ ವಿಶಾಲ ಹರವಿನ ನಿಯಂತ್ರಣಕ್ಕಾಗಿ, ಕ್ರೈಟೆಲ್ ® ಹರಡುವ ಮತ್ತು ಜೊಂಡು ಹುಲ್ಲುಗಳ ನಾಶಕ್ಕೆ ಟ್ಯಾಂಕ್ ಮಿಶ್ರಣದ ಪಾಲಿನ ಅಗತ್ಯವಿದೆ. ಇದು ಮೊಳಕೆ ಪೂರ್ವದ ನಾಶ ಮತ್ತು ಮಣ್ಣಿನಲ್ಲಿ ಶೇಷವಾಗುವ ಚಟುವಟಿಕೆ ಹೊಂದಿಲ್ಲ. ಇದನ್ನು ಎಲೆಗಳು ಶೀಘ್ರವಾಗಿ ಹೀರಿಕೊಂಡು ಸಕ್ರಿಯ ಬೆಳವಣಿಗೆಯ ಹಂತಕ್ಕೆ (ಮೆರಿಸ್ಟೆಮ್) ಕೊಂಡೊಯ್ಯುತ್ತವೆ. ಅಲ್ಲಿ ಇದು ಕೋಶ ವಿಭಜನೆಗೆ ಅಡ್ಡಿಪಡಿಸುತ್ತದೆ ಮತ್ತು ಸಕ್ರಿಯ ಬೆಳವಣಿಗೆಯ ಚಟುವಟಿಕೆಯನ್ನು ಪ್ರತಿಬಂಧಿಸುತ್ತದೆ. ಕ್ರೈಟೆಲ್® ಕಳೆನಾಶಕವನ್ನು ಲಿಪಿಡ್ ಸಂಶ್ಲೇಷಣೆ ಪ್ರತಿಬಂಧಕ (ಅಸಿಟೈಲ್-ಕೋಎಂಜೈಮ್ ಕಾರ್ಬಾಕ್ಸಿಲೇಸ್ ಪ್ರತಿಬಂಧಕ) ಎಂದು ವರ್ಗೀಕರಿಸಲಾಗುತ್ತದೆ. ಎಕಿನೋಕ್ಲೋವಾ ಎಸ್‌ಪಿಪಿ, ಡ್ಯಾಕ್ಟಲಾಕ್ಟೀನಿಯಂ ಈಜಿಪ್ಟಿಯಮ್, ಡಿಜಿಟೀರಿಯಾ ಎಸ್‌ಪಿಪಿಯಂತಹ ಕೊಲ್ಲಲು ಕಠಿಣವಾದ ಕಳೆಗಳನ್ನು ನಿವಾರಿಸಲು ಪರಿಣಾಮಕಾರಿಯಾಗಿದೆ.
ಬೆಳೆಗಳು
ನೇರ ಬಿತ್ತನೆಯ ಭತ್ತ (ಡಿಎಸ್ಆರ್)
ನೇರ ಬಿತ್ತನೆ ಅಕ್ಕಿ (ಡಿಎಸ್ಆರ್) ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಎಕಿನೋಕ್ಲೋವಾ ಎಸ್‌ಪಿಪಿ. (ಬಾರ್ನ್ಯಾರ್ಡ್ ಗ್ರಾಸ್)
- ಡಾಕ್ಟಿಲೋಕ್ಟೆನಿಯಮ್ ಈಜಿಪ್ಟಿಯಮ್ (ಕಾಡು ರಾಗಿ ಹುಲ್ಲು)
- ಡಿಜಿಟೇರಿಯಾ ಎಸ್‌ಪಿಪಿ. (ಏಡಿ ಹುಲ್ಲು)
ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.
ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.
ಸಂಪೂರ್ಣ ಬೆಳೆ ಪಟ್ಟಿ
- ನೇರ ಬಿತ್ತನೆಯ ಭತ್ತ (ಡಿಎಸ್‌ಆರ್)