ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಅಥಾರಿಟಿ® ನೆಕ್ಸ್ಟ್ ಕಳೆನಾಶಕ

ನಿರ್ಣಾಯಕ ರೀತಿಯಲ್ಲಿ ಕಳೆಯು ಬೆಳೆಗೆ ಸ್ಪರ್ಧೆ ನೀಡುವ ಅವಧಿಯು ಬೆಳೆಯ ಬೆಳವಣಿಗೆಯ ಹಂತದಲ್ಲಿ ಬರುತ್ತದೆ, ಇದು ಬೆಳೆಯ ಇಳುವರಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ನಷ್ಟಕ್ಕೆ ಕಾರಣವಾಗುತ್ತದೆ. ಅಥಾರಿಟಿ® ನೆಕ್ಸ್ಟ್ ಕಳೆನಾಶಕವು ಒಂದು ಹೊಸ ತಲೆಮಾರಿನ ಕಳೆ ಮೊಳೆಯುವ ಮೊದಲು ಬಳಸುವ ಕಳೆನಾಶಕ ಆಗಿದ್ದು, ಇದು ದಿನ-1 ರಿಂದಲೇ ವಿಶಾಲ ವ್ಯಾಪ್ತಿಯ ಕಳೆ ನಿಯಂತ್ರಣವನ್ನು ಒದಗಿಸುತ್ತದೆ, ಇದರಿಂದಾಗಿ ಬೆಳೆಗಾರರು ತಾವು ಬಯಸಿದ ಅವಧಿಯಲ್ಲಿ ಇಳುವರಿಯನ್ನು ಹೆಚ್ಚಿಸಬಹುದು.

ತ್ವರಿತ ವಿವರಣೆಯ ವಿಷಯಗಳು

  • ಇದರ ಎರಡು ಬಗೆಯ ಕಾರ್ಯ ವಿಧಾನ ಮತ್ತು ವ್ಯವಸ್ಥಿತ ಸ್ವರೂಪವು, ಎರಡು ಸಕ್ರಿಯ ಪದಾರ್ಥಗಳಾದ- ಸಲ್ಫೆಂಟ್ರಾಜೋನ್ ಮತ್ತು ಕ್ಲೋಮಾಜೋನ್‌ನ ಈ ಸಿದ್ಧ-ಮಿಶ್ರಣ ಸಂಯೋಜನೆಯನ್ನು ಕಬ್ಬು ಮತ್ತು ಸೋಯಾಬೀನ್‌ ಬೆಳೆಯಲ್ಲಿ ಕಳೆ ಮೊಳೆಯುವ ಮುನ್ನ ನಿಯಂತ್ರಣಕ್ಕಾಗಿ ಬಳಸುವ ಅನನ್ಯ ಉತ್ಪನ್ನವನ್ನಾಗಿ ಮಾಡಿದೆ
  • ದಿನ-1 ರಿಂದಲೇ ಕಠಿಣ ಕಳೆಗಳ ಮೇಲೆ ಅತ್ಯುತ್ತಮ ನಿಯಂತ್ರಣ
  • ಅನೇಕ ಬಾರಿ ಸಿಂಪಡಿಸುವ ಯಾವುದೇ ಅವಶ್ಯಕತೆ ಇಲ್ಲ, ಹಾಗಾಗಿ ಕಾರ್ಮಿಕ ವೆಚ್ಚ ಕಡಿಮೆ ಆಗುತ್ತದೆ
  • ಕಳೆಗಳ ಮೇಲೆ ದೀರ್ಘಾವಧಿಯ ನಿಯಂತ್ರಣ
  • ಆರಂಭದಿಂದಲೂ ಬೆಳೆಗೆ ಸಂಪೂರ್ಣ ಪೋಷಣೆ

ಸಕ್ರಿಯ ಪದಾರ್ಥಗಳು

  • ಸಲ್ಫೆನ್‌ಟ್ರಾಜೋನ್
  • ಕ್ಲೋಮಜೋನ್

ಲೇಬಲ್‌ಗಳು ಮತ್ತು ಎಸ್‌ಡಿಎಸ್

2 ಲೇಬಲ್‌ಗಳು ಲಭ್ಯವಿವೆ

ಬೆಂಬಲಿತ ಡಾಕ್ಯುಮೆಂಟ್‌ಗಳು

ಉತ್ಪನ್ನದ ಮೇಲ್ನೋಟ

ಅಥಾರಿಟಿ® ನೆಕ್ಸ್ಟ್ ಕಳೆನಾಶಕವು ಕಬ್ಬು ಮತ್ತು ಸೋಯಾಬೀನ್‌ ಬೆಳೆಗಳಲ್ಲಿ ಅಗಲ ಎಲೆ ಮತ್ತು ಹುಲ್ಲಿನ ರೂಪದ ಕಳೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕಳೆ ಮೊಳೆಯುವ ಮುನ್ನ ಬಳಸುವ ಕಳೆನಾಶಕ ಆಗಿದೆ. ಇದು ಎರಡು ಸಕ್ರಿಯ ಪದಾರ್ಥಗಳಾದ - ಸಲ್ಫೆಂಟ್ರಾಜೋನ್ ಮತ್ತು ಕ್ಲೋಮಾಜೋನ್‌ನ ಸಿದ್ಧ ಮಿಶ್ರಣವಾಗಿದೆ. ಸಲ್ಫೆಂಟ್ರಾಜೋನ್ ಆರಿಲ್ ಟ್ರಾಯಜೋಲಿನೋನ್ ಕಳೆನಾಶಕ ಆಗಿದೆ, ಹಾಗೆಯೇ ಕ್ಲೋಮಾಜೋನ್ ಐಸೋಕ್ಸಾಜೋಲಿಡಿನೋನ್ ಕಳೆನಾಶಕ ಆಗಿದೆ. ಅಥಾರಿಟಿ® ನೆಕ್ಸ್ಟ್ ಕಳೆನಾಶಕ ವಿಶಿಷ್ಟವಾದ ಎರಡು ಬಗೆಯ ಕ್ರಿಯೆಯೊಂದಿಗೆ ಆಯ್ದ ಮತ್ತು ವ್ಯವಸ್ಥಿತ ಸ್ವರೂಪದಲ್ಲಿದೆ. ಇದು ಇತರ ವರ್ಗದ ಕಳೆನಾಶಕಗಳಿಗೆ ಅಡ್ಡ ಪ್ರತಿರೋಧಕತೆ ಹೊಂದಿಲ್ಲ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.

ಸಂಪೂರ್ಣ ಬೆಳೆ ಪಟ್ಟಿ

  • ಸೋಯಾಬೀನ್
  • ಕಬ್ಬು