ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಅಫಿನಿಟಿ® ಕಳೆನಾಶಕ

ಅಫಿನಿಟಿ® ಕಳೆನಾಶಕವು ನಿಮ್ಮ ಗೋಧಿ ಮತ್ತು ಭತ್ತದ ಬೆಳೆಯನ್ನು ಕಾಡುವ ಅಗಲ ಎಲೆಯ ಕಳೆಯ ಸಮಸ್ಯೆಗಳಿಗೆ ವೇಗವಾಗಿ ಕಾರ್ಯ-ನಿರ್ವಹಿಸುವ, ಕಡಿಮೆ- ಬಳಕೆ- ದರದ ಉತ್ತರವಾಗಿದೆ. ಕಳೆಗಳಿಗೆ ವಿಶಾಲ ವ್ಯಾಪ್ತಿಯ ನಿಯಂತ್ರಣವನ್ನು ಒದಗಿಸಲು ಹುಲ್ಲಿನ ರೂಪದ ಕಳೆನಾಶಕಗಳನ್ನು ನಾಶಮಾಡಲು ಪರಿಪೂರ್ಣ ಟ್ಯಾಂಕ್ ಮಿಶ್ರಣ ಇದಾಗಿದೆ.

ತ್ವರಿತ ವಿವರಣೆಯ ವಿಷಯಗಳು

  • ಮಾಲ್ವಾ ಮುಂತಾದ ಶಕ್ತಿಶಾಲಿ ಮತ್ತು ಕೊಲ್ಲಲು ಕಠಿಣವಾಗಿರುವ ಕಳೆಗಳನ್ನು ನಿಯಂತ್ರಿಸುತ್ತದೆ.
  • 48 ರಿಂದ 72 ಗಂಟೆಗಳ ಒಳಗೆ ಫಲಿತಾಂಶ ತೋರಿಸುತ್ತದೆ
  • ಗೋಧಿ ಮತ್ತು ಅಕ್ಕಿ ಬೆಳೆಯಲ್ಲಿ ಅಗಲ ಎಲೆಯ ಕಳೆ ಗಿಡಗಳನ್ನು ನಿಯಂತ್ರಿಸುತ್ತದೆ
  • ಹಸಿರು ಲೇಬಲ್ ಉತ್ಪನ್ನ- ಬಳಸಲು ಸುಲಭ ಮತ್ತು ಸುರಕ್ಷಿತ. ಉಳಿದವುಗಳಿಗೆ ಹೋಲಿಸಿದರೆ ಮುಂದಿನ ಬೆಳೆ ಮತ್ತು ಪರಿಸರಕ್ಕೆ ಸುರಕ್ಷಿತ

ಸಕ್ರಿಯ ಪದಾರ್ಥಗಳು

  • ಕಾರ್ಫೆಂಟ್ರಾಜೋನ್-ಈಥೈಲ್

ಲೇಬಲ್‌ಗಳು ಮತ್ತು ಎಸ್‌ಡಿಎಸ್

4 ಲೇಬಲ್‌ಗಳು ಲಭ್ಯವಿವೆ

ಉತ್ಪನ್ನದ ಮೇಲ್ನೋಟ

ಅಫಿನಿಟಿ® ಕಳೆನಾಶಕವು ಗೋಧಿ ಮತ್ತು ಭತ್ತದಲ್ಲಿ ಕಳೆ ಮೊಳೆತ ನಂತರ ಉಪಯೋಗಿಸುವ ಪರಿಣಾಮಕಾರಿ ಕಳೆನಾಶಕವಾಗಿದೆ. ಅನನ್ಯ ರೀತಿಯ ಕ್ರಿಯೆಯೊಂದಿಗೆ ಇದು ಅಗಲ ಎಲೆಯ ಕಳೆಗಳಿಗೆ ಸಂಪೂರ್ಣ ವಿನಾಶಕಾರಿ ಆಗಿದೆ. ಇದು ಹುಲ್ಲಿನ ರೀತಿಯ ಕಳೆನಾಶಕಗಳನ್ನು ನಾಶಮಾಡಲು ಪರಿಪೂರ್ಣ ಟ್ಯಾಂಕ್ ಮಿಶ್ರಣವಾಗಿದೆ. ಇದು ಆಯ್ದ ಪರಿಣಾಮವನ್ನು ಮಾತ್ರ ನೀಡುವ ಸ್ವರೂಪದಲ್ಲಿದ್ದು, ಇದು ಭತ್ತದಲ್ಲಿ ಕೆರೆ ಬೆಂಡು ಗಿಡ, ಚೆಂಚಲಿ ಸೊಪ್ಪು, ಕಿರು ನೆಲ್ಲಿ, ಮೂಡುಗಟ್ಟಿನ ಗಿಡ, ಭೃಂಗರಾಜ, ಜೇಕು ಮತ್ತು ಗೋಧಿಯಲ್ಲಿನ ಚೆನೋಪೋಡಿಯಂ ಆಲ್ಬಮ್, ಮೆಲಿಲೋಟಸ್ ಇಂಡಿಕಾ, ಮೆಲಿಲೋಟಸ್ ಆಲ್ಬಾ, ಮೆಡಿಕಾಗೋ ಡೆಂಟಿಕ್ಯುಲೇಟ್, ಲಥೈರಸ್ ಅಫಾಕ, ಅನಾಲ್ಗಲಿಸ್ ಆರ್ವೆನ್ಸಿಸ್, ವಿಸಿಯಾ ಸಟಿವಾ, ಸರ್ಸಿಯಂ ಆರ್ವೆನ್ಸಿಸ್, ರುಮೆಕ್ಸ್ ಎಸ್‌ಪಿಪಿ. ಹಾಗೂ ಮಾಲ್ವಾ ಎಸ್‌ಪಿಪಿ. ರೀತಿಯ ಕೊಲ್ಲಲು ಕಠಿಣವಾಗಿರುವ ಅಗಲ ಎಲೆಯ ಕಳೆಗಳನ್ನು ನಿಯಂತ್ರಿಸಲು ಅನುಕೂಲ ಒದಗಿಸುತ್ತದೆ. ಅತ್ಯುತ್ತಮ ಫಲಿತಾಂಶಗಳಿಗಾಗಿ, ಹೆಚ್ಚಿನ ಕಳೆಗಳು ಕಾಣಿಸಿಕೊಳ್ಳುತ್ತಿರುವಾಗ ಮತ್ತು ಸಕ್ರಿಯವಾಗಿ ಬೆಳೆಯುತ್ತಿರುವಾಗ ಅಫಿನಿಟಿ® ಕಳೆನಾಶಕವನ್ನು ಬಳಸಿ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ. 

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.

ಸಂಪೂರ್ಣ ಬೆಳೆ ಪಟ್ಟಿ

  • ಗೋಧಿ
  • ನೇರ ಬಿತ್ತನೆಯ ಭತ್ತ (ಡಿಎಸ್‌ಆರ್)