ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಅಜಾಕಾ® ಡ್ಯುಯೋ ಶಿಲೀಂಧ್ರನಾಶಕ

ಅಜಾಕಾ® ಡ್ಯುಯೋ ಶಿಲೀಂಧ್ರನಾಶಕವು ವಿಶಾಲ-ವ್ಯಾಪ್ತಿಯ ಶಿಲೀಂಧ್ರನಾಶಕವಾಗಿದ್ದು, ವಿವಿಧ ರೀತಿಯ ಶಿಲೀಂಧ್ರ ರೋಗಗಳಿಂದ ಬೆಳೆಗಳನ್ನು ರಕ್ಷಿಸುವ ಮೂಲಕ ಉತ್ತಮ ಗುಣಮಟ್ಟದ ಇಳುವರಿ ಉತ್ಪಾದನೆಯ ಕಡೆ ಗಮನ ನೀಡುತ್ತದೆ. ಅದರ ಬಹು-ಬೆಳೆ ಪ್ರಯೋಜನ ಮತ್ತು ಪ್ರಮುಖ ಬೆಳೆಗಳಿಗೆ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಎಂಆರ್‌ಎಲ್‌ಗಳೊಂದಿಗೆ ಹಾಗೂ ಅದರ ಉತ್ತಮ ದಕ್ಷತೆಯಿಂದಾಗಿ, ಇದು ಸಸ್ಯಗಳ ಆರೋಗ್ಯ ಮತ್ತು ಚೈತನ್ಯಕ್ಕೆ ಉತ್ತಮ ಕೊಡುಗೆ ನೀಡುತ್ತದೆ ಮತ್ತು ಧಾನ್ಯಗಳು ಮತ್ತು ಹಣ್ಣುಗಳ ಗುಣಮಟ್ಟವನ್ನು ಸುಧಾರಿಸುತ್ತದೆ.

ಸ್ಟ್ರೋಬ್ಯುಲಿರಿನ್ ಮತ್ತು ಟ್ರಯಾಜೋಲ್ ರಾಸಾಯನಿಕಗಳ ವಿಶಿಷ್ಟ ಸಂಯೋಜನೆಯು ಅಜಾಕಾ® ಡ್ಯುಯೋವನ್ನು ದೀರ್ಘಾವಧಿಯ ರೋಗ ನಿರ್ವಹಣೆಗೆ ಹೆಚ್ಚು ಪರಿಣಾಮಕಾರಿ ಆಗಿಸುತ್ತದೆ.

ಮುಖ್ಯಾಂಶಗಳು

  • ಅಜಾಕಾ® ಡ್ಯುಯೋ ಶಿಲೀಂಧ್ರನಾಶಕವು ಅಜಾಕ್ಸಿಸ್ಟ್ರೋಬಿನ್ ಮತ್ತು ಡಿಫೆನೋಕೊನಜೋಲ್ ಎಂಬ 2 ರಾಸಾಯನಿಕಗಳನ್ನು ಒಳಗೊಂಡಿದ್ದು, ಇವುಗಳು ಶಿಲೀಂಧ್ರದ ವಿರುದ್ಧದ ರಕ್ಷಣೆಗಾಗಿ 2 ವಿಶಿಷ್ಟ ಕ್ರಮಗಳನ್ನು ಒದಗಿಸುತ್ತವೆ ಕಾಯಿಲೆಗಳು.
  • ಅಜಾಕ್ಸಿಸ್ಟ್ರೋಬಿನ್ ರಾಸಾಯನಿಕವು ಶಿಲೀಂಧ್ರದ ಉಸಿರಾಟ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಡಿಫೆನೋಕೊನಜೋಲ್ ಶಿಲೀಂಧ್ರಗಳ ಜೀವಕೋಶ ಗೋಡೆ ಪೊರೆ ರಚನೆಯನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುತ್ತದೆ.
  • ವಿಶಾಲ-ವ್ಯಾಪ್ತಿಯ ಮತ್ತು ದೀರ್ಘಾವಧಿಯ ರೋಗ ನಿಯಂತ್ರಣವನ್ನು ಒದಗಿಸುತ್ತದೆ.
  • ತ್ವರಿತವಾಗಿ ಹೀರಿಕೊಳ್ಳುತ್ತದೆ (ಮಳೆಯಲ್ಲಿ ತೊಳೆದು ಹೋಗುವುದಿಲ್ಲ)
  • ಬೆಳೆಯ ಆರೋಗ್ಯ ಮತ್ತು ಚೈತನ್ಯವನ್ನು ನಿರ್ವಹಿಸುತ್ತದೆ.
  • ಉತ್ತಮ ಗುಣಮಟ್ಟದ ಇಳುವರಿಯನ್ನು ನೀಡುತ್ತದೆ.

ಸಕ್ರಿಯ ಪದಾರ್ಥಗಳು

  • ಅಜಾಕ್ಸಿಸ್ಟ್ರೋಬಿನ್ 18.2 ಡಬ್ಲ್ಯೂ/ಡಬ್ಲ್ಯೂ + ಡಿಫೆನೋಕೊನಜೋಲ್ 11.4 ಡಬ್ಲ್ಯೂ/ಡಬ್ಲ್ಯೂ ಎಸ್‌ಸಿ

ಲೇಬಲ್‌ಗಳು ಮತ್ತು ಎಸ್‌ಡಿಎಸ್

3 ಲೇಬಲ್‌ಗಳು ಲಭ್ಯವಿವೆ

ಸಂಬಂಧಿತ ಡಾಕ್ಯುಮೆಂಟ್‌ಗಳು

ಉತ್ಪನ್ನದ ಮೇಲ್ನೋಟ

ಅಜಾಕಾ® ಡ್ಯುಯೋ ಶಿಲೀಂಧ್ರನಾಶಕವು ದೀರ್ಘಾವಧಿಯವರೆಗೆ ಶಿಲೀಂಧ್ರ ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಬೆಳೆಗಳು ಶಿಲೀಂಧ್ರ ರೋಗಗಳ ಸೋಂಕಿಗೆ ತುತ್ತಾಗುತ್ತವೆ, ಇದು ಬೆಳೆ ನಷ್ಟಕ್ಕೆ ಕಾರಣವಾಗುತ್ತದೆ ಮತ್ತು ಕಡಿಮೆ ಗುಣಮಟ್ಟದ ಉತ್ಪನ್ನಗಳೊಂದಿಗೆ ಇಳುವರಿ ಕಡಿಮೆಯಾಗುತ್ತದೆ. ಅಜಾಕಾ® ಡ್ಯುಯೋ ಶಿಲೀಂಧ್ರನಾಶಕವು ಬೆಳೆಗಳಿಗೆ ಉತ್ತಮ ರಕ್ಷಣೆ ನೀಡುತ್ತದೆ, ಬೆಳೆಗಳನ್ನು ಹೆಚ್ಚು ಸ್ಥಿರವಾಗಿಸುತ್ತದೆ, ಆನುವಂಶಿಕ ಸಾಮರ್ಥ್ಯದ ಪ್ರಕಾರ ಬೆಳೆಯಲು ಅವುಗಳಿಗೆ ಸಹಾಯ ಮಾಡುವ ಮೂಲಕ ರೈತರಿಗೆ ಹೆಚ್ಚಿನ ಇಳುವರಿ ಮತ್ತು ಉತ್ತಮ ಆದಾಯಕ್ಕೆ ಕಾರಣವಾಗುತ್ತದೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.