ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಕಂಪನಿಯ ಉದ್ದೇಶಗಳು ಮತ್ತು ಧ್ಯೇಯ



ಎಫ್ಎಂಸಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ (ಈ ಮೂಲಕ "ಕಂಪನಿ" ಎಂದು ಕರೆಯಲಾಗುತ್ತದೆ), "ಉದ್ಯಮದ ಮೂಲಕ ಸಮಾಜಕ್ಕೆ ಸೇವೆ ನೀಡುವ" ತತ್ವದಲ್ಲಿ ನಾವು ನಂಬಿಕೆ ಹೊಂದಿದ್ದೇವೆ". ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮವನ್ನು ನಮ್ಮ ಕಾರ್ಪೊರೇಟ್ ಸುಸ್ಥಿರತೆಯ ತತ್ವಗಳ ಆಧಾರ ಸ್ತಂಭಗಳ, ಅಂದರೆ ಸುರಕ್ಷತೆಯನ್ನು ಪೋಷಿಸುವುದು, ಪ್ರತಿಭೆಯನ್ನು ಸಬಲೀಕರಣಗೊಳಿಸುವುದು, ಆವಿಷ್ಕಾರವನ್ನು ಬೆಳೆಸುವುದು, ನಮ್ಮ ಸಂಪನ್ಮೂಲಗಳ ಮೇಲೆ ಗಮನ ಹರಿಸುವುದು ಮತ್ತು ಸಮುದಾಯವನ್ನು ಬೆಳೆಸುವುದು, ಇವುಗಳ ಮೇಲೆ ನಿರ್ಮಿಸಲಾಗಿದೆ. ಹಾಗೆ ಮಾಡುವಾಗ, ದೀರ್ಘಾವಧಿಯ ಸುಸ್ಥಿರ ಪರಿವರ್ತನೆ ಮತ್ತು ಸಾಮಾಜಿಕ ಸಂಯೋಜನೆಗೆ ಕಾರಣವಾಗುವ ತೊಡಗುವಿಕೆಗಳನ್ನು ಬೆಂಬಲಿಸುವ ಮೂಲಕ ನಾವು ಹೆಚ್ಚು ಸಮಾನ ಮತ್ತು ಒಳಗೊಳ್ಳುವ ಸಮಾಜವನ್ನು ರಚಿಸಲು ಬದ್ಧರಾಗಿದ್ದೇವೆ.



ಕಂಪನಿಯು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಉನ್ನತ ಗುಣಮಟ್ಟವನ್ನು ನಿರ್ವಹಿಸಲು ಬದ್ಧವಾಗಿದೆ ಮತ್ತು ನವೀಕರಿಸಿದ ಶಕ್ತಿ ಮತ್ತು ಶ್ರದ್ಧೆಯೊಂದಿಗೆ ಸಮುದಾಯ ಉಪಕ್ರಮಗಳಲ್ಲಿ ತನ್ನ ಪ್ರಗತಿಯನ್ನು ಮುಂದುವರೆಸಿದೆ. ಸಮಾಜದ ಸುಸ್ಥಿರ ಅಭಿವೃದ್ಧಿಗೆ ಸಹಾಯ ಮಾಡಲು ಕೈಗೊಳ್ಳುವ ತನ್ನ ಸಿಎಸ್ಆರ್ ಚಟುವಟಿಕೆಗಳನ್ನು ಪರಿಣಾಮಕಾರಿ ಆಗಿಸುವ ಮಾರ್ಗಸೂಚಿಗಳನ್ನು ನಿರ್ವಹಿಸುವುದು ಸಿಎಸ್ಆರ್ ನೀತಿಯ ಉದ್ದೇಶವಾಗಿದೆ. ಕಂಪನಿಯು ತಾನು ಕಾರ್ಯನಿರ್ವಹಿಸುವ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡಲು ಶ್ರಮಿಸುತ್ತದೆ.

ನಾವು ಉತ್ತಮವಾದ, ಹೆಚ್ಚು ಸಾಮಾಜಿಕವಾಗಿ ಒಳಗೊಳ್ಳುವ ಜಗತ್ತಿಗಾಗಿ ಕೆಲಸ ಮಾಡಬೇಕಿದೆ. ಪ್ರಕೃತಿ ಮತ್ತು ಪರಿಸರಕ್ಕೆ ಹಾನಿ ಮಾಡದ ರೀತಿಯಲ್ಲಿ ನಾವೆಲ್ಲರೂ ಈ ಪ್ರಪಂಚದಲ್ಲಿ ವಾಸಿಸಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಲು ನಮಗಿನ್ನೂ ಸಮಯವಿದೆ. ಆದರೆ ವ್ಯರ್ಥ ಮಾಡಲು ನಮ್ಮ ಬಳಿ ಸಮಯವಿಲ್ಲ.

ಕಂಪನಿಯು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನೀತಿಯನ್ನು ಅಭಿವೃದ್ಧಿಪಡಿಸಿದೆ, ಇದು ಸ್ಪಷ್ಟವಾದ ಕಾರ್ಯಸೂಚಿಯನ್ನು ವಿವರಿಸುತ್ತದೆ, ಅದರ ಮೂಲಕ ನಾವು ನೇರವಾಗಿ ಸಮುದಾಯಗಳಿಗೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತೇವೆ. ಈ ನೀತಿಯನ್ನು ಕಂಪನಿ ಆ್ಯಕ್ಟ್ 2013 ರ (ಇಲ್ಲಿ ''ಆ್ಯಕ್ಟ್'' ಎಂದು ಉಲ್ಲೇಖಿಸಲಾಗಿದೆ) ಸೆಕ್ಷನ್ 135 ಮತ್ತು ಭಾರತ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ (ಇಲ್ಲಿ ''ಸಚಿವಾಲಯ'' ಎಂದು ಉಲ್ಲೇಖಿಸಲಾಗಿದೆ) 2014 ಫೆಬ್ರವರಿ 27 ರಂದು ಸೂಚಿಸಿದ ಸಿಎಸ್‌ಆರ್ ನಿಯಮಗಳ (ಇನ್ನುಮುಂದೆ ''ನಿಯಮಗಳು'' ಎಂದು ಉಲ್ಲೇಖಿಸಲಾಗುತ್ತದೆ) ಮತ್ತು ಜನವರಿಯಲ್ಲಿ ಅವುಗಳಿಗೆ ಮಾಡಿದ ತಿದ್ದುಪಡಿಗಳ ಅನುಸಾರವಾಗಿ ಅಭಿವೃದ್ದಿಪಡಿಸಲಾಗಿದೆ

22 ನೇ, 2021. ಈ ಆ್ಯಕ್ಟ್‌ನ ಶೆಡ್ಯೂಲ್ vii ಪ್ರಕಾರ ಕಂಪನಿಯು ಭಾರತದಲ್ಲಿ ಕೈಗೊಂಡ ಎಲ್ಲಾ ಸಿಎಸ್ಆರ್ ಯೋಜನೆಗಳು/ಕಾರ್ಯಕ್ರಮಗಳಿಗೆ ಈ ನೀತಿಯು ಅನ್ವಯಿಸುತ್ತದೆ. ಕಂಪನಿಯ ಸುಸ್ಥಿರತೆಯ ತತ್ವಗಳನ್ನು ಪರಿಗಣಿಸಿ, ಕಂಪನಿಯು ನೀರನ್ನು ಕೊಡುಗೆಯ ಪ್ರಮುಖ ವಿಷಯವೆಂದು ಗುರುತಿಸಿದೆ. ನಮ್ಮ ದೇಶದ ದೂರದ ಹಳ್ಳಿಗಳು ಶುದ್ಧ ಮತ್ತು ಕುಡಿಯಲು ಯೋಗ್ಯವಾದ ನೀರಿಗಾಗಿ ಇನ್ನೂ ಹೆಣಗಾಡುತ್ತಿರುವ ಕಾರಣ, ಕಂಪನಿಯು ಜಲ ಶುದ್ಧೀಕರಣದ ಉದ್ದೇಶದೊಂದಿಗೆ ಸಂಬಂಧಿತ ಅನುಷ್ಠಾನ ಸಂಸ್ಥೆ(ಗಳು) ಸಹಭಾಗಿತ್ವದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಈ ವಿಷಯದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಹೆಚ್ಚುವರಿಯಾಗಿ, ಕಂಪನಿಯು ಈ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ

ಪರಿಸರ ಸುಸ್ಥಿರತೆ ಮತ್ತು ಕೃಷಿ ಸಮುದಾಯದ ಅಭಿವೃದ್ಧಿಯ ಕ್ಷೇತ್ರಗಳು.

ಸಿಎಸ್ಆರ್ ಚಟುವಟಿಕೆಗಳಿಗೆ ಷರತ್ತುಗಳು ಮತ್ತು ನಿರ್ಬಂಧಗಳು



ಸಿಎಸ್ಆರ್ ಸಮಿತಿ ಮತ್ತು ನಿರ್ದೇಶಕರ ಮಂಡಳಿಯು ಯಾವುದೇ ಸಿಎಸ್ಆರ್ ಯೋಜನೆಗಳು/ಕಾರ್ಯಕ್ರಮಗಳು/ಚಟುವಟಿಕೆಗಳನ್ನು ಕೈಗೊಳ್ಳುವಾಗ ಈ ಕೆಳಗಿನ ಷರತ್ತುಗಳು ಮತ್ತು ನಿರ್ಬಂಧಗಳಿಂದ ನಿಯಂತ್ರಿಸಲ್ಪಡುತ್ತದೆ:



- ಈ ನೀತಿಯ ಪ್ರಕಾರ, ಕಂಪನಿಯು ಕೈಗೊಳ್ಳುವ ಸಿಎಸ್ಆರ್ ಯೋಜನೆಗಳು/ಕಾರ್ಯಕ್ರಮಗಳು/ಚಟುವಟಿಕೆಗಳು, ಅದರ ಸಾಮಾನ್ಯ ವ್ಯವಹಾರವನ್ನು ಅನುಸರಿಸುವಲ್ಲಿ ಕೈಗೊಳ್ಳಲಾದ ಚಟುವಟಿಕೆಗಳನ್ನು ಹೊರತುಪಡಿಸಿರುತ್ತವೆ

- ಭಾರತದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಅಥವಾ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಭಾರತೀಯ ಕ್ರೀಡಾಪಟುಗಳಿಗೆ ಭಾರತದ ಹೊರಗೆ ತರಬೇತಿ ನೀಡುವುದನ್ನು ಹೊರತುಪಡಿಸಿ ಸಿಎಸ್ಆರ್ ಯೋಜನೆಗಳು/ಕಾರ್ಯಕ್ರಮಗಳು/ಚಟುವಟಿಕೆಗಳನ್ನು ಭಾರತದಲ್ಲಿ ಮಾತ್ರ ಕೈಗೊಳ್ಳಬೇಕು

- ಕಂಪನಿಯ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಮಾತ್ರ ಪ್ರಯೋಜನ ನೀಡುವ ಯೋಜನೆಗಳು/ಕಾರ್ಯಕ್ರಮಗಳು/ಚಟುವಟಿಕೆಗಳನ್ನು ಪರಿಗಣಿಸಲಾಗುವುದಿಲ್ಲ ಮತ್ತು ಅವುಗಳು ಸಿಎಸ್ಆರ್ ವೆಚ್ಚವಾಗಿ ಅರ್ಹತೆ ಪಡೆಯುವುದಿಲ್ಲ

- ಸೆಕ್ಷನ್ 182 ಅಡಿಯಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ನೀಡಿದ ಯಾವುದೇ ಮೊತ್ತದ ಕೊಡುಗೆಯನ್ನು ಪರಿಗಣಿಸಲಾಗುವುದಿಲ್ಲ ಮತ್ತು ಅದು ಸಿಎಸ್ಆರ್ ವೆಚ್ಚವಾಗಿ ಅರ್ಹತೆ ಪಡೆಯುವುದಿಲ್ಲ

- ಸಿಎಸ್ಆರ್ ಯೋಜನೆಗಳು/ಕಾರ್ಯಕ್ರಮಗಳು/ಚಟುವಟಿಕೆಗಳಿಂದ ಗಳಿಸುವ ಲಾಭ, ಯಾವುದಾದರೂ ಇದ್ದರೆ, ಅದು ವ್ಯಾಪಾರದ ಲಾಭ/ ಕಂಪನಿಯ ಲಾಭದ ಭಾಗವಾಗಿರುವುದಿಲ್ಲ

- ತನ್ನ ಉತ್ಪನ್ನಗಳು ಅಥವಾ ಸೇವೆಗಳಿಗೆ ಮಾರುಕಟ್ಟೆ ಪ್ರಯೋಜನಗಳನ್ನು ಪಡೆಯಲು ಕಂಪನಿಯು ಪ್ರಾಯೋಜಕತ್ವದ ಆಧಾರದ ಮೇಲೆ ಬೆಂಬಲಿಸುವ ಚಟುವಟಿಕೆಗಳು ಸಿಎಸ್ಆರ್ ವೆಚ್ಚದ ಭಾಗವಾಗಿರುವುದಿಲ್ಲ (ಮ್ಯಾರಥಾನ್‌ಗಳು, ಪ್ರಶಸ್ತಿಗಳು, ದತ್ತಿ ಕೊಡುಗೆಗಳು, ಜಾಹೀರಾತು, ಟಿವಿ ಕಾರ್ಯಕ್ರಮಗಳು ಇತ್ಯಾದಿ)

- ಭಾರತದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಇತರ ಯಾವುದೇ ಶಾಸನಬದ್ಧ ಜವಾಬ್ದಾರಿಗಳನ್ನು ಪೂರೈಸಲು ನಡೆಸಲಾದ ಚಟುವಟಿಕೆಗಳು ಸಿಎಸ್ಆರ್ ವೆಚ್ಚದ ಭಾಗವಾಗುವುದಿಲ್ಲ

ಫಂಡಿಂಗ್ ಜವಾಬ್ದಾರಿ



ಕಂಪನಿಗಳ ಆ್ಯಕ್ಟ್, 2013 (ಆ್ಯಕ್ಟ್) ಸೆಕ್ಷನ್ 135(5) ಪ್ರಕಾರ, ಹಿಂದಿನ ಮೂರು ಹಣಕಾಸು ವರ್ಷಗಳಲ್ಲಿ ಗಳಿಸಿದ ಸರಾಸರಿ ನಿವ್ವಳ ಲಾಭದ 2% ಅನ್ನು ಈ ಆ್ಯಕ್ಟ್‌ನ ಶೆಡ್ಯೂಲ್ VII (ತಿದ್ದುಪಡಿ ಮಾಡಿದಂತೆ) ರಲ್ಲಿ ಪಟ್ಟಿ ಮಾಡಲಾದ ಕೆಲವು ಗುರುತಿಸಲ್ಪಟ್ಟ ಚಟುವಟಿಕೆಗಳಲ್ಲಿ ಖರ್ಚು ಮಾಡಲು ಕಂಪನಿಯು ಬದ್ಧವಾಗಿದೆ. ಇದು ನೇರವಾಗಿ ಕಂಪನಿಯಿಂದ ಕೈಗೊಳ್ಳುವ ಚಟುವಟಿಕೆಗಳ ಮೂಲಕ ಮತ್ತು ಅನುಷ್ಠಾನಗೊಳಿಸುವ ಏಜೆನ್ಸಿ (ಗಳು) ಮೂಲಕ ಮಾಡುವ ಖರ್ಚುಗಳನ್ನು ಒಳಗೊಂಡಿರುತ್ತದೆ. ಕಂಪನಿಯು ಸರಾಸರಿ ನಿವ್ವಳ ಲಾಭದ 2% ಕ್ಕಿಂತ ಯಾವುದೇ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಿದರೆ, ಅದನ್ನು ಹೆಚ್ಚುವರಿ ಸಿಎಸ್ಆರ್ ವೆಚ್ಚವೆಂದು ಪರಿಗಣಿಸಲಾಗುತ್ತದೆ, ಇದನ್ನು ಕಾಯ್ದೆಯಡಿ ನಿಗದಿಪಡಿಸಿದ ಷರತ್ತುಗಳಿಗೆ ಒಳಪಟ್ಟು ತಕ್ಷಣದ ಮೂರು ಹಣಕಾಸು ವರ್ಷಗಳಲ್ಲಿ ಹೊಂದಿಸಬಹುದು.



ಕಂಪನಿಯು ಕಡಿಮೆ ಖರ್ಚು ಮಾಡಿದೆಯೇ ಅಥವಾ ಹೆಚ್ಚು ಖರ್ಚು ಮಾಡಿದೆಯೇ ಎಂದು ಲೆಕ್ಕ ಹಾಕಲು, ಈ ಕೆಳಗಿನವುಗಳನ್ನು ಪರಿಗಣಿಸಲಾಗುತ್ತದೆ:



ಎ. ಯೋಜನೆಯ ವೆಚ್ಚ - ಇದು ಯೋಜನೆಯ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಮಾಡಿದ ವಿನ್ಯಾಸ, ಅನುಷ್ಠಾನ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನದ ವೆಚ್ಚವನ್ನು ಒಳಗೊಂಡಿರುತ್ತದೆ

ಬಿ. ಆಡಳಿತಾತ್ಮಕ ಖರ್ಚುಗಳು - ಅಂತಹ ವೆಚ್ಚಗಳು ಕಂಪನಿಯ ಹಣಕಾಸು ವರ್ಷದ ಒಟ್ಟು ಸಿಎಸ್ಆರ್ ವೆಚ್ಚದ 5% ಮೀರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದಲ್ಲದೆ, ಈ ವೆಚ್ಚಗಳು ಕಂಪನಿಯು ವಿನ್ಯಾಸ, ಅನುಷ್ಠಾನ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕಾಗಿ ಮಾಡಿದ ವೆಚ್ಚಗಳನ್ನು ಒಳಗೊಳ್ಳುವುದಿಲ್ಲ



ಅನುಷ್ಠಾನಗೊಳಿಸುವ ಏಜೆನ್ಸಿಯ ಆಯ್ಕೆ



ಸಿಎಸ್ಆರ್ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಕಂಪನಿಯು ಅನುಷ್ಠಾನಗೊಳಿಸುವ ಏಜೆನ್ಸಿಯನ್ನು ನೇಮಿಸಬಹುದು. ಆಯ್ಕೆಯ ಮಾರ್ಗದರ್ಶಿ ಸೂತ್ರಗಳು ಹೀಗಿವೆ:



ಎ. ಸಿಎಸ್‌ಆರ್ ಚಟುವಟಿಕೆಗಳನ್ನು ಆಯ್ಕೆ ಮಾಡಿದ ಕಾರ್ಯನಿರ್ವಹಣಾ ಸಂಸ್ಥೆಯನ್ನು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 12 ಎ ಮತ್ತು 80 ಜಿ ಅಡಿಯಲ್ಲಿ ಅಥವಾ ಸಚಿವಾಲಯವು ಕಾಲಕಾಲಕ್ಕೆ ಸೂಚಿಸಬಹುದಾದ ಮಾನದಂಡಗಳ ಪ್ರಕಾರ ನೋಂದಾಯಿಸಬೇಕು

ಬಿ. ಅನುಷ್ಠಾನ ಸಂಸ್ಥೆಯು ಇದೇ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿ ಕನಿಷ್ಠ ಮೂರು ವರ್ಷಗಳ ಸ್ಥಾಪಿತ ದಾಖಲೆಯನ್ನು ಹೊಂದಿದೆ

ಸಿ. ಅನುಷ್ಠಾನಗೊಳಿಸುವ ಏಜೆನ್ಸಿಯು ಕಂಪನಿಗಳ ರಿಜಿಸ್ಟ್ರಾರ್‌‌ಗೆ ಸಿಎಸ್ಆರ್-1 ಫಾರಂ ಅನ್ನು ಸಲ್ಲಿಸಿರಬೇಕು

ಡಿ. ಕಾರ್ಯಗತಗೊಳಿಸುವ ಸಂಸ್ಥೆಯು ತನ್ನ ಚಟುವಟಿಕೆಗಳನ್ನು ಶ್ರದ್ಧೆಯಿಂದ ನಿರ್ವಹಿಸುವಲ್ಲಿ ಸದ್ಭಾವನೆಯನ್ನು ಹೊಂದಿರಬೇಕು

ಇ. ಅಂತಹ ಅನುಷ್ಠಾನ ಏಜೆನ್ಸಿಯ ನೇಮಕಾತಿಗೆ ಮೊದಲು ಸರಿಯಾದ ಪರಿಶೀಲನೆಯನ್ನು ನಡೆಸಬಹುದು

ಎಫ್. ಕಾಲಕಾಲಕ್ಕೆ ಸಚಿವಾಲಯವು ಸೂಚಿಸುವಂತೆ, ಅನುಷ್ಠಾನಗೊಳಿಸುವ ಏಜೆನ್ಸಿಯು ಅಂತಹ ಇತರ ಮಾನದಂಡಗಳನ್ನು ಪೂರೈಸುವ ಅಗತ್ಯವಿರಬಹುದು

ಅನುಷ್ಠಾನ ಮತ್ತು ಮೇಲ್ವಿಚಾರಣೆ



ಅನುಷ್ಠಾನ



- ಕಂಪನಿಯು ನೋಂದಾಯಿತ ಟ್ರಸ್ಟ್ ಅಥವಾ ನೋಂದಾಯಿತ ಸೊಸೈಟಿ ಮೂಲಕ, ಅದಕ್ಕಾಗಿ ರೂಪಿಸಿದ ಕಾಯ್ದೆ ಮತ್ತು ನಿಯಮಗಳ ನಿಬಂಧನೆಗಳ ಪ್ರಕಾರ ಗುರುತಿಸಲಾದ ಪ್ರದೇಶಗಳಲ್ಲಿ ಸಿಎಸ್ಆರ್ ಯೋಜನೆಗಳು/ಕಾರ್ಯಕ್ರಮಗಳು/ಚಟುವಟಿಕೆಗಳನ್ನು ಕೈಗೊಳ್ಳಬಹುದು

- ಕಂಪನಿಯು ಯೋಜನೆಗಳು/ಕಾರ್ಯಕ್ರಮಗಳು/ಚಟುವಟಿಕೆಗಳನ್ನು ಕೈಗೊಳ್ಳಲು ಇತರ ಕಂಪನಿಗಳೊಂದಿಗೆ ಸಹಯೋಗ ಮಾಡಬಹುದು, ಹಾಗೆ ಮಾಡುವಾಗ ಆಯಾ ಕಂಪನಿಗಳ ಸಿಎಸ್ಆರ್ ಸಮಿತಿಗಳು, ಆ್ಯಕ್ಟ್ ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳಿಗೆ ಅನುಗುಣವಾಗಿ ಅಂತಹ ಯೋಜನೆಗಳು ಅಥವಾ ಕಾರ್ಯಕ್ರಮಗಳ ಬಗ್ಗೆ ಪ್ರತ್ಯೇಕವಾಗಿ ವರದಿ ಮಾಡುವ ಸ್ಥಾನದಲ್ಲಿರಬೇಕು

- ಕಂಪನಿಯು ತನ್ನದೇ ಆದ ಸಿಎಸ್‌ಆರ್ ಸಾಮರ್ಥ್ಯಗಳನ್ನು ನಿರ್ಮಿಸಬಹುದು, ಅಂದರೆ ಸ್ವಂತ ಸಿಬ್ಬಂದಿ ಹಾಗೆಯೇ ಕನಿಷ್ಠ ಮೂರು ಹಣಕಾಸು ವರ್ಷಗಳ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಸಂಸ್ಥೆಗಳ ಮೂಲಕ ಅವರ ಅನುಷ್ಠಾನ ಏಜೆನ್ಸಿಗಳು ಮತ್ತು ಸಿಎಸ್‌ಆರ್ ಸಮಿತಿಯ ಸೂಕ್ತವೆಂದು ಪರಿಗಣಿಸಬಹುದಾದ ಯಾವುದೇ ಇತರ ಮಾನದಂಡಗಳು



ಮೇಲ್ವಿಚಾರಣೆ



- ಅನುಷ್ಠಾನಗೊಳಿಸುವ ಏಜೆನ್ಸಿ ಅಥವಾ ಮಾರಾಟಗಾರರು ನೈತಿಕ ಆಚರಣೆಗಳನ್ನು ಅನುಸರಿಸುವುದನ್ನು ಕಂಪನಿಯು ಖಚಿತಪಡಿಸಬೇಕು ಮತ್ತು ಅನುಷ್ಠಾನಗೊಳಿಸುವ ಏಜೆನ್ಸಿ ಅಥವಾ ಮಾರಾಟಗಾರರಿಗೆ ಮಾಡಲಾದ ಎಲ್ಲಾ ಪಾವತಿಗಳು ಹಂತ ಹಂತವಾಗಿ ಇರಬೇಕು

- ನಿರಂತರ ಪ್ರತಿಕ್ರಿಯೆ ಕಾರ್ಯ ವಿಧಾನದೊಂದಿಗೆ, ಗುರುತಿಸಲಾದ ಪ್ರಮುಖ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಕಾರ್ಯಕ್ಷಮತೆಯ ಸೂಚಕಗಳ ಸಹಾಯದಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿದ್ದಲ್ಲಿ ಅನುಷ್ಠಾನದಲ್ಲಿ ಮಧ್ಯ-ಕೋರ್ಸ್ ತಿದ್ದುಪಡಿಯನ್ನು ಆಶ್ರಯಿಸಲಾಗುತ್ತದೆ

- ಕಂಪನಿಯು ಕ್ಷೇತ್ರ ಭೇಟಿಗಳು ಅಥವಾ ರಿವ್ಯೂ ಕರೆಗಳ ಮೂಲಕ ಯೋಜನೆಯ ಅನುಷ್ಠಾನ ಮತ್ತು ಅನುಷ್ಠಾನ ಸಂಸ್ಥೆ/(ಗಳ) ಕಾರ್ಯಕ್ಷಮತೆಯನ್ನು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡಬಹುದು, ಮತ್ತು ಅಂತಹ ಮೇಲ್ವಿಚಾರಣೆಗಾಗಿ ಉದ್ಯೋಗಿ(ಗಳ) ನಿಯೋಜಿತ ತಂಡವನ್ನು ನೇಮಿಸಬಹುದು

- ಪ್ರಭಾವದ ಮೌಲ್ಯಮಾಪನ - ಹಿಂದಿನ ಮೂರು ವರ್ಷಗಳಲ್ಲಿ ಸರಾಸರಿ ರೂ. 10 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಸಿಎಸ್‌ಆರ್ ಹೊಣೆಗಾರಿಕೆಯ ಸಂದರ್ಭದಲ್ಲಿ, ರೂ. 01 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಖರ್ಚುಗಳನ್ನು ಹೊಂದಿರುವ ಸಿಎಸ್‌ಆರ್ ಯೋಜನೆಗಳಿಗೆ ಸ್ವತಂತ್ರ ಏಜೆನ್ಸಿಯ ಮೂಲಕ ಪ್ರಭಾವ ಮೌಲ್ಯಮಾಪನ ಕೈಗೊಳ್ಳುವುದನ್ನು ಕಂಪನಿಯು ಖಚಿತಪಡಿಸುತ್ತದೆ. ಅಂತಹ ಮೌಲ್ಯಮಾಪನಕ್ಕಾಗಿ ಮಾಡಿದ ವೆಚ್ಚವು ಒಟ್ಟು ಸಿಎಸ್‌ಆರ್ ವೆಚ್ಚದ 5% ಮೀರಬಾರದು

ಹಣಕಾಸು ವರ್ಷ ಅಥವಾ ರೂ. 50 ಲಕ್ಷ, ಯಾವುದು ಕಡಿಮೆಯೋ ಅದು

ವಾರ್ಷಿಕ ಕ್ರಿಯಾ ಯೋಜನೆ



ಕಂಪನಿಯು ವರ್ಷದಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳು ಮತ್ತು ಖರ್ಚು ಮಾಡಬೇಕಾದ ಸಿಎಸ್ಆರ್ ವೆಚ್ಚವನ್ನು ಗುರುತಿಸಲು ಕಂಪನಿಯ ವಾರ್ಷಿಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತದೆ, ಅದು ನಿಯಮಗಳಲ್ಲಿ ಉಲ್ಲೇಖಿಸಲಾದ ವಿವರಗಳನ್ನು ಒಳಗೊಂಡಿರುತ್ತದೆ.



ಇದಲ್ಲದೆ, ವಾರ್ಷಿಕ ಕ್ರಿಯಾ ಯೋಜನೆಯನ್ನು ರೂಪಿಸಲು ಅಗತ್ಯವಿರುವ ಮಾರ್ಗದರ್ಶನ ತತ್ವಗಳು ಈ ಕೆಳಗಿನಂತಿವೆ:



ಎ. ಸಿಎಸ್ಆರ್ ಕಾರ್ಯಕ್ರಮಗಳು ತಿದ್ದುಪಡಿ ಮಾಡಿದ ಸಿಎಸ್ಆರ್ ನಿಯಮಗಳ ಅಡಿಯಲ್ಲಿ ನಿರ್ಬಂಧಿಸಲ್ಪಟ್ಟ ಚಟುವಟಿಕೆಗಳನ್ನು ಒಳಗೊಂಡಿರುವುದಿಲ್ಲ.

ಬಿ. ಕಂಪನಿಯು ಸ್ಥಳೀಯ ಪ್ರದೇಶಗಳು ಮತ್ತು ತಾನು ಕಾರ್ಯಾಚರಣೆ ನಡೆಸುವ ಸುತ್ತಲಿನ ಪ್ರದೇಶಗಳಲ್ಲಿ ಸಿಎಸ್ಆರ್ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು.

ಸಿ. ಸಿಎಸ್ಆರ್ ಚಟುವಟಿಕೆಗಳನ್ನು ನೇರವಾಗಿ ಅಥವಾ ಅನುಷ್ಠಾನಗೊಳಿಸುವ ಸಂಸ್ಥೆ/ಗಳ ಮೂಲಕ ಕೈಗೊಳ್ಳಬಹುದು.

ಡಿ. ಅನುಷ್ಠಾನಗೊಳಿಸುವ ಏಜೆನ್ಸಿಗಳಿಗೆ ಅಥವಾ ಮಾರಾಟಗಾರರಿಗೆ ಮಾಡಿದ ಪಾವತಿಗಳು ಹಂತ ಹಂತವಾಗಿರಬೇಕು.

ಇ. ಸಿಎಸ್ಆರ್ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅನುಸರಿಸಬೇಕಾದ ಎಲ್ಲಾ ಮಾರ್ಗದರ್ಶಿ ತತ್ವಗಳನ್ನು ಅನುಸರಿಸಬೇಕು

ವಾರ್ಷಿಕ ಕ್ರಿಯಾ ಯೋಜನೆಯನ್ನು ರೂಪಿಸುವುದು.

ಯಾವುದೇ ಹಣಕಾಸು ವರ್ಷದಲ್ಲಿ, ಹೊಸ ಯೋಜನೆ(ಗಳ) ಕಾರಣದಿಂದಾಗಿ ಅಥವಾ ಅನುಮೋದಿತ ಯೋಜನೆ(ಗಳ) ವೆಚ್ಚ ಹೆಚ್ಚಳದ ಕಾರಣದಿಂದಾಗಿ ಯಾವುದೇ ಬಜೆಟ್ ಮಾಡದ ವೆಚ್ಚವನ್ನು ಒಳಗೊಳ್ಳಲು ಕಂಪನಿಯ ವಾರ್ಷಿಕ ಕ್ರಿಯಾ ಯೋಜನೆಯನ್ನು ಮಾರ್ಪಾಡು ಮಾಡಬಹುದು. ಕಾಯ್ದೆಯ ನಿಬಂಧನೆಗಳಿಗೆ ಒಳಪಟ್ಟು, ಕಂಪನಿಯು ತನ್ನ ಸಿಎಸ್ಆರ್ ಖರ್ಚನ್ನು ಬಂಡವಾಳ ಸ್ವತ್ತನ್ನು ರಚಿಸಲು ಅಥವಾ ಸ್ವಾಧೀನಪಡಿಸಿಕೊಳ್ಳಲು ಕೂಡ ಬಳಸಬಹುದು.

ಆಡಳಿತ ಕಾರ್ಯವಿಧಾನ



ನಮ್ಮ ಸಿಎಸ್ಆರ್ ನೀತಿಯನ್ನು ಕಂಪನಿಯ ನಿರ್ದೇಶಕರ ಮಂಡಳಿಯು ನಿಯಂತ್ರಿಸುತ್ತದೆ. ನೀತಿ ಮತ್ತು ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡಲು ಮಂಡಳಿಯು ಕನಿಷ್ಠ ಎರಡು ನಿರ್ದೇಶಕರ ಸಿಎಸ್ಆರ್ ಸಮಿತಿಯನ್ನು ರಚಿಸಿದೆ.



ಎ. ನಿರ್ದೇಶಕರ ಮಂಡಳಿ

- ಮಂಡಳಿಯು ಸಿಎಸ್ಆರ್ ಕಾರ್ಯಕ್ರಮಗಳ ಕಾರ್ಯಕ್ಷಮತೆ ಮತ್ತು ಪರಿಣಾಮವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಪರಿಶೀಲಿಸುತ್ತದೆ, ಅಗತ್ಯವಿದ್ದರೆ ಇನ್ಪುಟ್ ಮತ್ತು ಕೋರ್ಸ್ ತಿದ್ದುಪಡಿಗಳನ್ನು ಒದಗಿಸುತ್ತದೆ ಮತ್ತು ಇಲ್ಲಿಯವರೆಗೆ ವಿತರಿಸಲಾದ ಸಿಎಸ್ಆರ್ ಫಂಡ್‌ಗಳು ಕಂಪನಿಯ ಸಿಎಸ್ಆರ್ ನೀತಿಗೆ ಸರಿ ಹೊಂದುತ್ತದೆ ಮತ್ತು ಅನುಮೋದಿಸಿದ ಉದ್ದೇಶಗಳಿಗಾಗಿ ಮತ್ತು ಅನುಮೋದಿಸಿದ ರೀತಿಯಲ್ಲಿಯೇ ಅದನ್ನು ಬಳಸಲಾಗಿದೆ ಎಂದು ಕಂಡುಕೊಳ್ಳುತ್ತದೆ.

- ಇಲ್ಲಿಯವರೆಗೆ ವಿತರಣೆಯಾದ ಸಿಎಸ್ಆರ್ ಫಂಡ್‌ಗಳನ್ನು ಮಂಡಳಿ ಅನುಮೋದಿಸಿದ ಉದ್ದೇಶಗಳಿಗಾಗಿ ಮತ್ತು ಅನುಮೋದಿಸಿದ ರೀತಿಯಲ್ಲಿಯೇ ಬಳಸಲಾಗಿದೆ ಎಂಬುದನ್ನು ಸಿಎಫ್ಒ (ನೇಮಕಗೊಂಡಿದ್ದಲ್ಲಿ) ಅಥವಾ ಹಣಕಾಸು ನಿರ್ವಹಣೆಗೆ ಜವಾಬ್ದಾರರಾಗಿರುವ ಯಾವುದೇ ಇತರ ವ್ಯಕ್ತಿಯು ಪ್ರಮಾಣೀಕರಿಸುತ್ತಾರೆ.

ಬಿ. ನಿರ್ದೇಶಕರ ಮಂಡಳಿಯ ಸಿಎಸ್ಆರ್ ಸಮಿತಿ

ಸಿಎಸ್ಆರ್ ಸಮಿತಿಯು ಸಿಎಸ್ಆರ್ ಕಾರ್ಯಕ್ಷಮತೆಯ ಮೇಲೆ ಮೇಲ್ನೋಟ ಮತ್ತು ಮಾರ್ಗದರ್ಶನವನ್ನು ಒದಗಿಸುತ್ತದೆ ಮತ್ತು ಸಿಎಸ್ಆರ್ ನೀತಿ, ಬದ್ಧತೆಗಳು ಮತ್ತು ಅನ್ವಯವಾಗುವ ಸಿಎಸ್ಆರ್ ನಿಬಂಧನೆಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡುತ್ತದೆ.

ಸಿಎಸ್ಆರ್ ಸಮಿತಿಯ ಪಾತ್ರ ಮತ್ತು ಜವಾಬ್ದಾರಿಗಳು:

- ಮಂಡಳಿಗೆ ರಚನೆ ಮತ್ತು ಶಿಫಾರಸು, ಸಿಎಸ್ಆರ್ ನೀತಿಯ ಪ್ರಕಾರ ಕಂಪನಿಯು ಕೈಗೊಳ್ಳಬೇಕಾದ ಚಟುವಟಿಕೆಗಳನ್ನು ಸೂಚಿಸುತ್ತದೆ

ದಿ ಆ್ಯಕ್ಟ್

- ಕಾಲಕಾಲಕ್ಕೆ ಕಂಪನಿಯ ಸಿಎಸ್ಆರ್ ಪಾಲಿಸಿಯ ಮೇಲ್ವಿಚಾರಣೆ ಮಾಡುವುದು

- ಕಾಯ್ದೆಯ ನಿಬಂಧನೆಗಳ ಪ್ರಕಾರ ಮಂಡಳಿಗೆ ವಾರ್ಷಿಕ ಕಾರ್ಯ ಯೋಜನೆಯ ರಚನೆ ಮತ್ತು ಶಿಫಾರಸು

- ವರ್ಷದ ಯಾವುದೇ ಸಮಯದಲ್ಲಿ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಯಾವುದೇ ಬದಲಾವಣೆಯ ಶಿಫಾರಸು ಮತ್ತು ಸಿಎಸ್‌ಆರ್ ಪಾಲಿಸಿಗೆ ಅಗತ್ಯವಿರುವ ಅಪ್ಡೇಟ್, ಯಾವುದಾದರೂ ಇದ್ದರೆ

- ವಾರ್ಷಿಕ ಕ್ರಿಯಾ ಯೋಜನೆಯ ಪ್ರಕಾರ ಸಿಎಸ್ಆರ್ ಚಟುವಟಿಕೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆ

-ಕಾಯ್ದೆಯ ನಿಬಂಧನೆಗಳ ಪ್ರಕಾರ ಕಂಪನಿಯ ಯೋಜನೆಗಳನ್ನು 'ಚಾಲ್ತಿಯಲ್ಲಿರುವ ಯೋಜನೆಗಳು' ಎಂದು ಗುರುತಿಸಿ ಮತ್ತು ಅದನ್ನು ಮಂಡಳಿಗೆ ಶಿಫಾರಸು ಮಾಡಿ

- ವಾರ್ಷಿಕ ಸಿಎಸ್ಆರ್ ವೆಚ್ಚದ ಬಜೆಟ್ ಅನುಮೋದನೆಗಾಗಿ ಮಂಡಳಿಗೆ ಅದನ್ನು ಶಿಫಾರಸು ಮಾಡಿ;

- ಅನ್ವಯವಾದಾಗಲೆಲ್ಲಾ ಸಿಎಸ್ಆರ್ ಯೋಜನೆಗಳಿಗೆ ಥರ್ಡ್ ಪಾರ್ಟಿಗಳ ಮೂಲಕ ಪರಿಣಾಮದ ಮೌಲ್ಯಮಾಪನವನ್ನು ಕೈಗೊಳ್ಳಿ

- ಅನ್ವಯವಾಗುವ ಚೌಕಟ್ಟಿನೊಳಗೆ ಕಂಪನಿಯ ಸಿಎಸ್ಆರ್ ಚಟುವಟಿಕೆಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಿ

- ಕಂಪನಿಯ ನಿರ್ದೇಶಕರ ಮಂಡಳಿಗೆ ಸಿಎಸ್ಆರ್ ವರದಿಯ ಒಟ್ಟಾರೆ ವ್ಯಾಪ್ತಿಯನ್ನು ನಿರ್ಧರಿಸಿ, ಇನ್ಪುಟ್ ಒದಗಿಸಿ ಮತ್ತು ಅಳವಡಿಕೆಗೆ ಶಿಫಾರಸು ಮಾಡಿ

- ಯಾವುದೇ ಶಾಸನಬದ್ಧ ಅಥವಾ ಇತರ ನಿಯಂತ್ರಕ ಅಗತ್ಯತೆಗಳ ಅಡಿಯಲ್ಲಿ ಸಮಿತಿಯು ನಿರ್ವಹಿಸಬೇಕಾದ ಮತ್ತು ಕಾಲಕಾಲಕ್ಕೆ ಮಂಡಳಿಯಿಂದ ನಿಯೋಜಿಸಲಾದ ಇತರ ಕಾರ್ಯಗಳ ನಿರ್ವಹಣೆ

ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನೀತಿ ನಿಯಮಗಳು, 2013 ರ ತಿದ್ದುಪಡಿಯಂತೆ ಹೊರಡಿಸಲಾದ ನೀತಿಯನ್ನು ಮಂಡಳಿಯ ಸಿಎಸ್ಆರ್ ಸಮಿತಿಯು ಶಿಫಾರಸು ಮಾಡಿದೆ ಮತ್ತು ನಿರ್ದೇಶಕರ ಮಂಡಳಿಯು ಅಳವಡಿಸಿಕೊಂಡಿದೆ



ಮಿತಿ ಮತ್ತು ತಿದ್ದುಪಡಿ



ನಿರ್ದೇಶಕರ ಮಂಡಳಿಯು ತಮ್ಮ ವಿವೇಚನೆಯಿಂದ ಮತ್ತು ಸಿಎಸ್ಆರ್ ಸಮಿತಿಯ ಶಿಫಾರಸುಗಳ ಮೇಲೆ, ಕಾಲಕಾಲಕ್ಕೆ ಈ ನೀತಿಗೆ ಯಾವುದೇ ಬದಲಾವಣೆಗಳು/ಮಾರ್ಪಾಡುಗಳು ಮತ್ತು/ಅಥವಾ ತಿದ್ದುಪಡಿಗಳನ್ನು ಮಾಡಬಹುದು. ಕೋರಂ, ಸಭೆಯ ನೋಟೀಸ್, ಡಾಕ್ಯುಮೆಂಟೇಶನ್ ಇತ್ಯಾದಿಗಳಿಗೆ ಸಂಬಂಧಿಸಿದ ಅವಶ್ಯಕತೆಗಳು ಭಾರತದ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ (ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ) ನೀಡಿದ ಅನ್ವಯವಾಗುವ ಕಾರ್ಯದರ್ಶಿ ಮಾನದಂಡಗಳಿಗೆ ಅನುಗುಣವಾಗಿರಬೇಕು ಮತ್ತು ಸ್ಪಷ್ಟವಾಗಿ ತಿಳಿಸದ ಹೊರತು, ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದಿರಬೇಕು.



ಈ ನೀತಿ ಮತ್ತು ಕಾಯಿದೆಯ ನಿಬಂಧನೆಗಳು ಅಥವಾ ಯಾವುದೇ ಇತರ ಶಾಸನಬದ್ಧ ಶಾಸನಗಳು, ನಿಯಮಗಳು, ಅಂತಹ ಕಾಯಿದೆಯ ನಿಬಂಧನೆಗಳು ಅಥವಾ ಶಾಸನಬದ್ಧ ಕಾಯಿದೆಗಳ ನಡುವೆ ಯಾವುದೇ ಸಂಘರ್ಷದ ಸಂದರ್ಭದಲ್ಲಿ, ಈ ನೀತಿ ಮತ್ತು ಸಂಬಂಧಿತ ನಿಬಂಧನೆಗಳ ಮೇಲೆ ನಿಯಮಗಳು ಚಾಲ್ತಿಯಲ್ಲಿರುತ್ತವೆ ಮತ್ತು ಸ್ವಯಂಚಾಲಿತವಾಗಿ ಅನ್ವಯಿಸುತ್ತವೆ ಹಾಗೂ ಈ ನೀತಿಯ ಸಂಬಂಧಿತ ನಿಬಂಧನೆಗಳನ್ನು ಕಾನೂನಿಗೆ ಅನುಗುಣವಾಗಿ ಮಾಡಲು ಸರಿಯಾದ ಸಮಯದಲ್ಲಿ ತಿದ್ದುಪಡಿ/ಮಾರ್ಪಾಡಿಸಲಾಗುವುದು.

ರಿಪೋರ್ಟ್ ಮಾಡಲಾಗುತ್ತಿದೆ



- ಕಂಪನಿಯ ಸಿಎಸ್ಆರ್ ಚಟುವಟಿಕೆಗಳನ್ನು ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿನ ಅವಶ್ಯಕತೆಗಳಿಗೆ ಅನುಗುಣವಾಗಿ ಕಂಪನಿಯ ವಾರ್ಷಿಕ ವರದಿಯಲ್ಲಿ ಪ್ರಕಟಗೊಳಿಸಲಾಗುತ್ತದೆ

- ಕಂಪನಿಯ ನಿರ್ದೇಶಕರ ಮಂಡಳಿಯು ಸಿಎಸ್ಆರ್ ಸಮಿತಿಯ ಸಂಯೋಜನೆ ಮತ್ತು ಮಂಡಳಿಯು ಅನುಮೋದಿಸಿದ ಸಿಎಸ್ಆರ್ ನೀತಿ ಮತ್ತು ಯೋಜನೆಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ, ಯಾವುದಾದರೂ ಇದ್ದರೆ ಅಲ್ಲಿ ಸಾರ್ವಜನಿಕ ಪ್ರವೇಶಕ್ಕಾಗಿ ಬಹಿರಂಗಪಡಿಸಬೇಕು

_____________________________________________________________________________

ಸಿಎಸ್ಆರ್ ಸಮಿತಿ ಸಂಯೋಜನೆ ಮತ್ತು ಸಿಎಸ್ಆರ್ ಪ್ರಾಜೆಕ್ಟ್‌ಗಳು