ಮೆಕ್ಕೆಜೋಳ ರೈತರಿಗೆ ಕೊರಾಜೆನ್® 80 ಮಿ.ಲೀ ಅನ್ನು ಪರಿಚಯಿಸಲಾಗುತ್ತಿದೆ
ಗೃಹೋಪಯೋಗಿ ವಸ್ತುಗಳು ಅಥವಾ ಮಾರುಕಟ್ಟೆಯಲ್ಲಿ ವೇಗವಾಗಿ ಮಾರಾಟವಾಗುವ ಗ್ರಾಹಕ ಸರಕುಗಳ ಜಗತ್ತಿನಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಅನೇಕ ಬ್ರ್ಯಾಂಡ್‌ಗಳ ಉದಾಹರಣೆಗಳಿವೆ, ಆದರೆ ಕೃಷಿ-ಉತ್ಪನ್ನ ಉದ್ಯಮದ ಬ್ರ್ಯಾಂಡ್‌ಗಳಲ್ಲಿ ನಮ್ಮ ಕೊರಾಜೆನ್®ನಂತಿರುವ ಅತ್ಯುತ್ತಮ ಇತಿಹಾಸ ಮತ್ತು ಸ್ವೀಕೃತಿಯನ್ನು ಹೊಂದಿರುವ ಇತರ ಬ್ರ್ಯಾಂಡ್‌ಗಳ ಯಾವುದೇ ಉದಾಹರಣೆಗಳಿಲ್ಲ. ಕೊರಾಜೆನ್® ಒಂದು ದಶಕಕ್ಕಿಂತ ಅಧಿಕ ಕಾಲದಿಂದ ಭಾರತೀಯ ರೈತರ ಕೃಷಿ ಕಾರ್ಯಕ್ಕೆ ಸೇವೆ ನೀಡುತ್ತಿದೆ ಮತ್ತು ಇಂದು ರೈತ ಸಮುದಾಯದಲ್ಲಿ ಮನೆಮಾತಾಗಿದೆ, ಪ್ರತಿಸ್ಪರ್ಧಿಗಳು ಕೂಡ ಅಸೂಯೆಪಡುವುದಕ್ಕಿಂತ ಹೆಚ್ಚಾಗಿ ಈ ಬ್ರ್ಯಾಂಡ್ ಅನ್ನು ಗೌರವಿಸುತ್ತಾರೆ!!
ಮೆಕ್ಕೆಜೋಳದಲ್ಲಿ ಫಾಲ್ ಸೈನಿಕ ಹುಳುವಿನ ನಿರ್ವಹಣೆಯು ಕೊರಾಜೆನ್®ನ ಯಶಸ್ಸಿನ ಕಥೆಗಳಲ್ಲಿ ಒಂದಾಗಿದೆ. ನಮ್ಮ ತಂಡವು ಸಫಲ್ ಅಭಿಯಾನದ ಮೂಲಕ ಒಂದು ಅದ್ಭುತ ಕೆಲಸ ಮಾಡಿದೆ, ದೇಶವ್ಯಾಪಿ ವಿಸ್ತರಣೆ ವ್ಯವಸ್ಥೆಯನ್ನು ಸಜ್ಜುಗೊಳಿಸುವ ಮೂಲಕ ಫಾಲ್ ಸೈನಿಕ ಹುಳು ಆಕ್ರಮಣಕಾರಿ ಕೀಟದ ಸಮಸ್ಯೆಗೆ ಹೋರಾಡಲು ಭಾರತೀಯ ರೈತರನ್ನು ಸಶಕ್ತಗೊಳಿಸಿತು ಮತ್ತು ಭಾರತದಲ್ಲಿ ಕೊರಾಜೆನ್® ಈ ಅಭಿಯಾನವನ್ನು ಮುನ್ನಡೆಸಿತು. ಈ ಯಶಸ್ಸಿನ ಕಥೆಯನ್ನು ಇನ್ನಷ್ಟು ಸಂಭ್ರಮಿಸಲು, ನಾವು ಈ ವರ್ಷ ಕೊರಾಜೆನ್® 80 ಎಂಎಲ್ ಪ್ಯಾಕ್‌ಗೆ ಭಾರತೀಯ ನಿಯಂತ್ರಣ ಪ್ರಾಧಿಕಾರದಿಂದ (ಸಿಐಬಿಆರ್‌ಸಿ) ಅನುಮೋದನೆ ಪಡೆದಿದ್ದೇವೆ. ಈ ಎಸ್‌ಕೆಯು ಏಕೆ ಮುಖ್ಯವಾಗಿದೆ (ಅಥವಾ ಆಗಲಿದೆ)? ಯಾಕೆಂದರೆ, ಇದು ಕೊರಾಜೆನ್® ಬಳಕೆಯ ದರಕ್ಕೆ ಸಂಬಂಧಿಸಿದ್ದಾಗಿದೆ. ಈ ಪ್ಯಾಕ್ ಒಂದು ಎಕರೆ ಡೋಸ್‌ಗೆ ಹೇಳಿ ಮಾಡಿಸಿದ್ದಾಗಿದೆ. ಇದು ನಮ್ಮ ಮಾರಾಟ ತಂಡ ಮತ್ತು ಮಾರ್ಗಕ್ಕೆ ಸರಿಯಾದ ರೀತಿಯಲ್ಲಿ ಸಹಾಯ ಮಾಡುತ್ತದೆ ಮತ್ತು ಮೆಕ್ಕೆಜೋಳ ಬೆಳೆಗಾರರಿಗೆ ತಮ್ಮ ಬೆಳೆಯನ್ನು ಕಾಡುವ ವಿನಾಶಕಾರಿ ಕೀಟವನ್ನು ಸಮರ್ಥವಾಗಿ ಪರಿಹರಿಸಲು ಸರಿಯಾದ ಡೋಸ್ ಅನ್ನು ಹೊಂದಲು ಸಹಾಯ ಮಾಡುತ್ತದೆ.
80 ಎಂಎಲ್ ಎಸ್‌ಕೆಯು ಪರಿಚಯವು ಅನೇಕ ಮೊದಲನೆಯವುಗಳೊಂದಿಗೆ ವಿಶೇಷವಾಗಿದೆ. ಸಾವ್ಲಿ ಉತ್ಪಾದನಾ ತಂಡದಿಂದ 80 ಎಂಎಲ್ ಎಸ್‌ಕೆಯು ಅನ್ನು ಪ್ರತ್ಯೇಕ ಒಂದು-ಪೊಟ್ಟಣದಲ್ಲಿ ತಯಾರಿಸಿದ ಮೊದಲ ಅಭಿಯಾನ ಇದಾಗಿದೆ. ಸ್ಥಳೀಯ ಮಾರಾಟ ಮತ್ತು ಮಾರುಕಟ್ಟೆ ತಂಡವು ಕೂಡಾ ಈ ಹೊಸ ಕುಟುಂಬದ ಸದಸ್ಯರನ್ನು ಸಂತಸದಿಂದ ಸ್ವಾಗತಿಸಿತು. 1 ಎಸ್‌ಬಿಯು ತಂಡವು ಮೆಕ್ಕೆಜೋಳ ಬೆಳೆಯುವ ತಮ್ಮ ಪ್ರಮುಖ ಪೂರ್ವ ಪ್ರದೇಶಗಳಾದ ಉತ್ತರ ಪ್ರದೇಶ ಮತ್ತು ಬಿಹಾರದ ಪೂರ್ವ ಭಾಗದಲ್ಲಿ ಈ ಹೊಸ ಪ್ಯಾಕ್ ಅನ್ನು ಪ್ರಕಟಿಸಿತು. ಈ ವರ್ಷ ತಂಡವು ಮೆಕ್ಕೆಜೋಳದಲ್ಲಿ ಸಂಪೂರ್ಣವಾಗಿ ವಿನೂತನ ಕೊರಾಜೆನ್®, ದಸ್ ಕಾ ದಮ್ ಅಭಿಯಾನವನ್ನು ನಡೆಸಲು ನಿರ್ಧರಿಸಿದೆ. ಉತ್ತಮ ಚಿಂತನೆಗಳಿಂದ ವಿನ್ಯಾಸಗೊಳಿಸಿದ ಸಂವಹನ ತಂತ್ರವಾದ 'ದಸ್ ಕಾ ದಮ್' (ಹತ್ತರ ಶಕ್ತಿ - ಹತ್ತು ನೀತಿಗಳಿಂದ ಸ್ಪೂರ್ತಿ ಪಡೆದಿರುವ!), ಸರಿಯಾದ ಪ್ರಮಾಣ ಮತ್ತು ಸರಿಯಾದ ಸಮಯದಲ್ಲಿ ಬಳಸಿದಾಗ ಮೆಕ್ಕೆಜೋಳ ಬೆಳೆಗಾರರಿಗೆ ಕೊರಾಜೆನ್® ನೀಡುವ 10 ವಿಶಿಷ್ಟ ಪ್ರಯೋಜನಗಳನ್ನು ಪ್ರದರ್ಶಿಸುತ್ತದೆ. ಮಾರ್ಕಾಮ್ ತಂಡವು ಸಮಯವನ್ನು ವ್ಯರ್ಥವಾಗಿ ವ್ಯಯ ಮಾಡದೆ ಟೀಸರ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಮಾರಾಟದ ಹಂತದಲ್ಲಿ ಸಾಮೂಹಿಕ ಬ್ರ್ಯಾಂಡಿಂಗ್‌ಗಾಗಿ ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸಾಪ್‌ನಲ್ಲಿ ಪ್ರಚಾರ ನೀಡುವುದರಲ್ಲಿ ಅದ್ಭುತ ಕೆಲಸ ಮಾಡಿದೆ.
ಬದಲಾಗುತ್ತಿರುವ ಆಹಾರ ಪದ್ಧತಿ ಮತ್ತು ಅದರ ಹಲವಾರು ಸಹಾಯಕ ಬಳಕೆಗಳ ಬೆಳವಣಿಗೆಯೊಂದಿಗೆ ಮೆಕ್ಕೆಜೋಳವು ಭಾರತದಲ್ಲಿ ಪ್ರಾಮುಖ್ಯತೆ ಗಳಿಸುತ್ತಿರುವ ಬೆಳೆಯಾಗಿದೆ. ಮೆಕ್ಕೆಜೋಳದ ಮಾರಾಟ ಬೆಲೆಯನ್ನು ಸುಧಾರಿಸಲು ಸರ್ಕಾರದ ಬೆಂಬಲದೊಂದಿಗೆ, ರೈತರು ಉತ್ತಮ ರಾಸಾಯನಿಕ ಬಳಕೆಯ ಮೊರೆ ಹೋಗುತ್ತಾರೆ. ಕೊರಾಜೆನ್® ಭಾರತದ ಹೆಚ್ಚಿನ ಮೆಕ್ಕೆಜೋಳ ಬೆಳೆಗಾರರ ಮೊದಲ ಆದ್ಯತೆ ಮತ್ತು ಮೆಕ್ಕೆಜೋಳದಲ್ಲಿ ಫಾಲ್ ಸೈನಿಕ ಹುಳು ಹಾಗೂ ಇತರ ಲೆಪಿಡೋಪ್ಟರನ್ ಕೀಟಗಳನ್ನು ನಿರ್ವಹಿಸಲು ಲಭ್ಯವಿರುವ ಅತ್ಯುತ್ತಮ ಪರಿಹಾರವಾಗಿದೆ ಮತ್ತು ಆಗಿರಲಿದೆ.