ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ನ್ಯೂಟ್ರೋಮ್ಯಾಕ್ಸ್® ಜಿಆರ್ ಜೈವಿಕ ಪರಿಹಾರ

ನ್ಯೂಟ್ರೋಮ್ಯಾಕ್ಸ್® ಜಿಆರ್ ಜೈವಿಕ ಪರಿಹಾರದಲ್ಲಿ 25% ವೆಸಿಕ್ಯುಲರ್ ಆರ್ಬಸ್ಕುಲರ್ ಮೈಕೋರಿಜಾ ಇದೆ. ನ್ಯೂಟ್ರೋಮ್ಯಾಕ್ಸ್® ಜೈವಿಕ ಪರಿಹಾರ ಮೈಕೋರಿಜಾವನ್ನು ಹೊಂದಿದ್ದು, ಇದು ಬೇರುಗಳ ವಿಸ್ತರಿತ ತೋಳುಗಳಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಎಫ್‌ಸಿಒ ಮಾನದಂಡಗಳ ಪ್ರಕಾರ ಬೀಜಕ ಎಣಿಕೆಗಳು ಮತ್ತು ಸೋಂಕಿನ ಸಂಭಾವ್ಯತೆ ಹೊಂದಿರುವ ಮೈಕೋರಿಜಾ ಆಧರಿತವಾಗಿದೆ. ನ್ಯೂಟ್ರೋಮ್ಯಾಕ್ಸ್® ಜೈವಿಕ ಪರಿಹಾರ ಆಸ್ಕೋಫಿಲಮ್ ನೋಡೋಸಮ್, ಹ್ಯೂಮಿಕ್ ಆಮ್ಲ, ಅಮಿನೋ ಆಮ್ಲ, ಆಸ್ಕೋರ್ಬಿಕ್ ಆಮ್ಲ, ಆಲ್ಫಾ ಟೋಕೊಫೆರಾಲ್, ಥಿಯಾಮಿನ್ ಮತ್ತು ಮೈಯೋ ಇನೋಸೀಟಲ್‌ಗಳಂತಹ 7 ಶಕ್ತಿ ವರ್ಧಕಗಳನ್ನು ಹೊಂದಿದೆ. ಈ ಶಕ್ತಿ ವರ್ಧಕಗಳು ನ್ಯೂಟ್ರೋಮ್ಯಾಕ್ಸ್‌® ಜೈವಿಕ ಪರಿಹಾರದಲ್ಲಿ ಮೈಕೋರಿಜಾವನ್ನು ಸಕ್ರಿಯಗೊಳಿಸಲು ಮತ್ತು ಸ್ಥಿರತೆ ಕಾಪಾಡಲು ಸಹಾಯ ಮಾಡುತ್ತವೆ.

ತ್ವರಿತ ವಿವರಣೆಯ ವಿಷಯಗಳು

  • ನ್ಯೂಟ್ರೋಮ್ಯಾಕ್ಸ್® ಜೈವಿಕ ಪರಿಹಾರ ನೀರು ಹೀರಿಕೊಳ್ಳುವ ಮಣ್ಣಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಮಣ್ಣಿನ ತೇವಾಂಶವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ
  • ನ್ಯೂಟ್ರೋಮ್ಯಾಕ್ಸ್® ಜೈವಿಕ ಪರಿಹಾರ ಪೋಷಕಾಂಶಗಳ ಹೀರುವಿಕೆ ಮತ್ತು ಅವುಗಳನ್ನು ಬೇರುಗಳಿಗೆ ತಲುಪಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಬೇರಿನ ಗಾತ್ರ ಮತ್ತು ಅಗಲ ವರ್ಧಿಸುತ್ತದೆ
  • ನ್ಯೂಟ್ರೋಮ್ಯಾಕ್ಸ್® ಜೈವಿಕ ಪರಿಹಾರ ಉತ್ತಮ ಗುಣಮಟ್ಟ ಮತ್ತು ಹೆಚ್ಚಿನ ಇಳುವರಿಗೆ ಸಹಾಯ ಮಾಡುತ್ತದೆ
  • ನ್ಯೂಟ್ರೋಮ್ಯಾಕ್ಸ್® ಜೈವಿಕ ಪರಿಹಾರಗಳ ಸಣ್ಣ ಕಣಗಳು ನೀರಿನಲ್ಲಿ ಸುಲಭವಾಗಿ ಕರಗಬಲ್ಲವು

ಸಕ್ರಿಯ ಪದಾರ್ಥಗಳು

  • 25% ಮೈಕೋರಿಜಾ ಜಿಆರ್

ಲೇಬಲ್‌ಗಳು ಮತ್ತು ಎಸ್‌ಡಿಎಸ್

3 ಲೇಬಲ್‌ಗಳು ಲಭ್ಯವಿವೆ

ಉತ್ಪನ್ನದ ಮೇಲ್ನೋಟ

ಆಹಾರ ಭದ್ರತೆಗೆ ಕೊಡುಗೆ ನೀಡುವ ಸಲುವಾಗಿ, ಮಣ್ಣನ್ನು ಆರೋಗ್ಯವಾಗಿ ಇರಿಸುವುದು ಬಹಳ ಮುಖ್ಯ. ನ್ಯೂಟ್ರೋಮ್ಯಾಕ್ಸ್® ಜೈವಿಕಪರಿಹಾರದಂತಹ ಮೈಕೋರಿಜಲ್ ಜೈವಿಕ ಗೊಬ್ಬರಗಳು ಮಣ್ಣಿನ ಪೋಷಣೆಯಲ್ಲಿನ ಅಂತರವನ್ನು ತುಂಬಿಸಲು ಉತ್ತಮ ಉತ್ತರವಾಗಿದೆ. ನ್ಯೂಟ್ರೋಮ್ಯಾಕ್ಸ್® ಜೈವಿಕ ಪರಿಹಾರ ಮಣ್ಣು ಮತ್ತು ಬೇರುಗಳ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ.ಇದು ಹರಳಿನ ರೂಪದ ಮೈಕೋರಿಜಲ್ ಜೈವಿಕ ಪರಿಹಾರವಾಗಿದ್ದು, ಇದು ಹೆಚ್ಚಿನ ಬೆಳೆಗಳಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳಲು ಮತ್ತು ಬೇರಿನ ಪ್ರಸರಣಕ್ಕೆ ಸಹಾಯ ಮಾಡುತ್ತದೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.

ಸಂಪೂರ್ಣ ಬೆಳೆ ಪಟ್ಟಿ

  • ಭತ್ತ
  • ಗೋಧಿ
  • ಆಲೂಗಡ್ಡೆ
  • ಸೇಬು
  • ದಾಳಿಂಬೆ