ಆರ್ಕ್™ ಫಾರ್ಮ್ ಇಂಟೆಲಿಜೆನ್ಸ್
ಎಫ್ಎಂಸಿಯ ನವೀನ ನಿಖರ ಕೃಷಿ ವೇದಿಕೆ ಆರ್ಕ್™ ಫಾರ್ಮ್ ಇಂಟೆಲಿಜೆನ್ಸ್ ಈಗ ಭಾರತದಲ್ಲಿ ಲಭ್ಯವಿದೆ. ಕೃಷಿ ಭೂಮಿ ಸೆನ್ಸಾರ್‌ಗಳ ನೈಜ-ಸಮಯದ ಡೇಟಾ ಆಧಾರದ ಮೇಲೆ ಭವಿಷ್ಯ ಸೂಚಕ ಮಾಡೆಲಿಂಗ್ ಬಳಸಿ, ಆರ್ಕ್™ ಫಾರ್ಮ್ ಇಂಟೆಲಿಜೆನ್ಸ್ ಬೆಳೆಗಾರರು ಮತ್ತು ಸಲಹೆಗಾರರಿಗೆ ಬೆಳವಣಿಗೆ ಹಂತದಲ್ಲಿರುವ ಸಮಸ್ಯೆಯನ್ನು ನೋಡಲು ಮತ್ತು ಹೆಚ್ಚು ಸುಸ್ಥಿರ ಮತ್ತು ವೆಚ್ಚ-ಪರಿಣಾಮಕಾರಿ ನಿಯಂತ್ರಣಕ್ಕಾಗಿ ಬೆಳೆ ರಕ್ಷಣಾ ಉತ್ಪನ್ನಗಳನ್ನು ಎಲ್ಲಿ ಅಗತ್ಯವಿದೆಯೋ ಅಲ್ಲಿ ಮತ್ತು ಯಾವಾಗ ಅಗತ್ಯವಿದೆಯೋ ಆಗ ನಿಖರವಾಗಿ ಬಳಸಲು ಅನುವು ಮಾಡಿಕೊಡುತ್ತದೆ.
ಆರ್ಕ್™ ಫಾರ್ಮ್ ಇಂಟೆಲಿಜೆನ್ಸ್ ಬೆಳೆಗಾರರು ಮತ್ತು ಸಲಹೆಗಾರರಿಗೆ ಈ ಸಾಮರ್ಥ್ಯಗಳನ್ನು ನೀಡುತ್ತದೆ
- ಮುಂದಿನ ವಾರದ ಕೀಟ ಬಾಧೆಯನ್ನು 90% ವರೆಗೆ ನಿಖರತೆಯೊಂದಿಗೆ (ಆಯ್ದ ಬೆಳೆಗಳು/ಮಾರುಕಟ್ಟೆಗಳಲ್ಲಿ) ನೋಡಬಹುದು.
- ಕಸ್ಟಮೈಸ್ ಮಾಡಿದ ಸೂಚನೆಗಳು ಮತ್ತು ಶಿಫಾರಸು ಮಾಡಲಾದ ಚಿಕಿತ್ಸೆ ಆಯ್ಕೆಗಳೊಂದಿಗೆ ಮುಂಬರುವ ಸಮಸ್ಯೆಗಳ ಕುರಿತು ಎಚ್ಚರಿಕೆ ವಹಿಸಬಹುದು.
- ಸುಸ್ಥಿರತೆಯನ್ನು ನಿರ್ವಹಿಸಲು ಸಹಾಯ ಮಾಡಲು - ಸರಿಯಾದ ಬೆಳೆ ರಕ್ಷಣಾ ಉತ್ಪನ್ನಗಳನ್ನು ಎಲ್ಲಿ ಮತ್ತು ಯಾವಾಗ ಅಗತ್ಯವಿದೆಯೋ ಆಗ ನಿಖರವಾಗಿ ಬಳಸಲಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
- ಕಡಿಮೆ ವೆಚ್ಚಗಳೊಂದಿಗೆ ಲಾಭದಾಯಕತೆಗಾಗಿ ಬೆಳೆ ನೆಡುವಿಕೆ ಮತ್ತು ಕೀಟ ನಿರ್ವಹಣೆಯ ವೇಳಾಪಟ್ಟಿಗಳನ್ನು ಉತ್ತಮವಾಗಿ ಸಿದ್ಧಪಡಿಸಬಹುದು.
- ಅತ್ಯಂತ ಪ್ರಮುಖ ಕೃಷಿ ನಿರ್ವಹಣಾ ಕಾರ್ಯಗಳ ಮೇಲೆ ಗಮನಹರಿಸಲು ಬೆಳೆಯ ಕುರಿತು ನೀಡುವ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡಬಹುದು.
ಪ್ರಮುಖ ಫೀಚರ್‌ಗಳು
ಸುಧಾರಿತ ಕೀಟ ಬಾಧೆ ಮುನ್ಸೂಚನೆ: ರೈತರು ನೈಜ-ಸಮಯದ ಡೇಟಾದೊಂದಿಗೆ ಕೃಷಿ ಭೂಮಿಯ ಪರಿಸ್ಥಿತಿಗಳು ಮತ್ತು ಕೀಟ ಬಾಧೆಯನ್ನು ಮೇಲ್ವಿಚಾರಣೆ ಮಾಡಬಹುದು. ಮುನ್ಸೂಚಕ ಮಾಡೆಲಿಂಗ್ ಬೆಳೆಗಾರರು ಮತ್ತು ಸಲಹೆಗಾರರಿಗೆ ಕೀಟ ಬಾಧೆಯನ್ನು ತಡೆಗಟ್ಟಲು ಸಹಾಯ ಮಾಡಲು ಸಕ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಎಫ್ಎಂಸಿ ಉತ್ಪನ್ನ ಪೋರ್ಟ್‌ಫೋಲಿಯೋ: ಬೆಳೆ-ನಿರ್ದಿಷ್ಟ ಪರಿಹಾರಗಳಿಗಾಗಿ ಉತ್ಪನ್ನ ವರ್ಗಗಳ (ಕೀಟನಾಶಕಗಳು / ಕಳೆನಾಶಕಗಳು / ಶಿಲೀಂಧ್ರನಾಶಕಗಳು) ಪ್ರಕಾರ ಎಫ್ಎಂಸಿಯ ಉದ್ಯಮ-ಪ್ರಮುಖ ಉತ್ಪನ್ನಗಳ ಬಗ್ಗೆ ವಿವರವಾದ ಮಾಹಿತಿಯನ್ನು ಸುಲಭವಾಗಿ ನೋಡಿ.
ಯೋಜನೆಗಳು ಮತ್ತು ಸ್ಪರ್ಧೆಗಳು: ನೀವು ಎಫ್‌ಎಂಸಿ ಉತ್ಪನ್ನಗಳನ್ನು ಖರೀದಿಸಿದಾಗ ಆಕರ್ಷಕ ಯೋಜನೆಗಳನ್ನು ಪಡೆದುಕೊಳ್ಳಿ. ಆ್ಯಪ್‌ನಲ್ಲಿ ನೀಡಲಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಮತ್ತು ಬಂಪರ್ ಬಹುಮಾನಗಳನ್ನು ಗೆಲ್ಲಿರಿ.
ಬೂಮ್ ಸ್ಪ್ರೇ ಸೇವೆ: ಇನ್-ಆ್ಯಪ್ ಕ್ಯಾಲೆಂಡರ್ ಮೂಲಕ ಬೂಮ್ ಸ್ಪ್ರೇ ಸೇವೆಯನ್ನು ಸಲೀಸಾಗಿ ನಿಗದಿಪಡಿಸುವ ಮತ್ತು ಸಂಯೋಜಿತ ಗೇಟ್‌ವೇಗಳ ಮೂಲಕ ಆನ್ಲೈನ್‌ನಲ್ಲಿ ಪಾವತಿಸುವ ಮೂಲಕ ನಿಖರತೆ, ಉತ್ಪಾದಕತೆ ಮತ್ತು ಲಾಭವನ್ನು ಹೆಚ್ಚಿಸಲು ಈ ಸೇವೆಯು ಸಹಾಯ ಮಾಡುತ್ತದೆ.
ಹವಾಮಾನದ ಮುನ್ಸೂಚನೆ: ಋತುಮಾನದ ಬದಲಾವಣೆಗಳಿಗೆ ಸಿದ್ಧರಾಗಿರಿ ಮತ್ತು ಸುಧಾರಿತ ಹತ್ತು ದಿನದ ಹವಾಮಾನ ಮುನ್ಸೂಚನೆಯೊಂದಿಗೆ ಮಾಹಿತಿಯುಕ್ತ ಬೆಳೆ ಆರೈಕೆ ಯೋಜನೆಗಳನ್ನು ಅಭಿವೃದ್ಧಿಪಡಿಸಿ.
ಆನ್ಲೈನ್‌ನಲ್ಲಿ ಉತ್ಪನ್ನಗಳನ್ನು ಖರೀದಿಸಿ: ರೈತರು ಆ್ಯಪ್‌ನಿಂದ ಹೊರ ಹೋಗದೆ ಅಮೆಜಾನ್ ಬ್ರ್ಯಾಂಡ್ ಸ್ಟೋರ್ ಮೂಲಕ ಎಫ್ಎಂಸಿ ಉತ್ಪನ್ನಗಳನ್ನು ಖರೀದಿಸಬಹುದು. ಕೆಲವು ಸರಳ ಹಂತಗಳಲ್ಲಿ, ಉತ್ಪನ್ನಗಳು ತೊಂದರೆರಹಿತವಾಗಿ ನಿಮ್ಮ ಮನೆಬಾಗಿಲಿಗೆ ತಲುಪುತ್ತದೆ.
ಪ್ರಾದೇಶಿಕ ಭಾಷೆಯ ಅಕ್ಸೆಸ್: ಆದ್ಯತೆಯ ಪ್ರಾದೇಶಿಕ ಭಾಷೆಯನ್ನು ಆಯ್ಕೆ ಮಾಡಿ ಮತ್ತು ಆ್ಯಪ್‌ನ ಎಲ್ಲಾ ವಿಷಯ ಮತ್ತು ಫೀಚರ್‌ಗಳನ್ನು ತಡೆರಹಿತವಾಗಿ ನೋಡಿ. ಲಭ್ಯವಿರುವ ಭಾಷೆಗಳಲ್ಲಿ ತಮಿಳು, ತೆಲುಗು, ಕನ್ನಡ, ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಸೇರಿವೆ.
ಆ್ಯಪಲ್ ಮತ್ತು ಆ್ಯಂಡ್ರಾಯ್ಡ್ ಸ್ಟೋರ್‌ಗಳಲ್ಲಿ ಆರ್ಕ್™ ಫಾರ್ಮ್ ಇಂಟೆಲಿಜೆನ್ಸ್ ಆ್ಯಪ್ ಡೌನ್ಲೋಡ್ ಮಾಡಿ.
ನೀವು fmc.com ಭೇಟಿ ನೀಡಿ ಮತ್ತು ಆರ್ಕ್™ ಫಾರ್ಮ್ ಇಂಟೆಲಿಜೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ ಮತ್ತು ಎಫ್ಎಂಸಿ ಇಂಡಿಯಾವನ್ನು ಇಲ್ಲಿ ಫಾಲೋ ಮಾಡಿ Facebook ಮತ್ತು YouTube.